ಬೆಂಗಳೂರು: ಪುರುಷನ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರದ ಬಿಡಿಎ ಲೇಔಟ್ ನಲ್ಲಿ ಎಸೆದು ದುಷ್ಕ ರ್ಮಿಗಳು ಪರಾರಿ ಯಾಗಿದ್ದಾರೆ. ಆರೋ ಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಗಂಗಮ್ಮನಗುಡಿ ಲಕ್ಷ್ಮೀಪುರದ ಬಿಡಿಎ ಲೇಔಟ್ನಲ್ಲಿ ಶುಕ್ರ ವಾರ ಬೆಳಗ್ಗೆ ಸ್ಥಳೀಯರು ವಾಯುವಿಹಾರ ಮಾಡುತ್ತಿದ್ದರು.ಆ ವೇಳೆ ನಾಯಿಗಳು ಚೀಲ ಎಳೆಯುತ್ತಿದ್ದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳು ವ್ಯಕ್ತಿಯನ್ನು ಹತ್ಯೆ ಮಾಡಿ, ಶವವನ್ನು ಚೀಲಕ್ಕೆ ತುಂಬಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಹಾಗೂ ಸೀನ್ ಆಫ್ ಕ್ರೈಮ್ ಆಫೀಸರ್(ಸೋಕೋ) ತಂಡದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಪರಿಚಿತ ಶವದ ಗುರುತು ಪತ್ತೆ ಹಚ್ಚಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

