Breaking News

ಕೊಲೆ: ಮುಸ್ಲಿಮ್‌ ಹೆಸರು ಬದಲಿಸಿಕೊಂಡಿದ್ದ ವ್ಯಕ್ತಿ 31 ವರ್ಷ ಬಳಿಕ ಬಂಧನ

ಲಕ್ನೋ: ಸಲೀಮ್‌ ವಾಸ್ತಿಕ್‌ ಎಂಬ ಯೂಟ್ಯೂಬರ್‌ನನ್ನು 1995ರ ಹತ್ಯೆಯೊಂದರ ಸಂಬಂಧ ಈಗ ಬಂಧಿಸಲಾಗಿದೆ. ಸಲೀಮ್‌ ಖಾನ್‌ ಎಂಬ ಹೆಸರಿದ್ದ ಈತ ಈ ಹತ್ಯೆಯ ಬಳಿಕ ಸಲೀಮ್‌ ವಾಸ್ತಿಕ್‌ ಎಂದು ಹೆಸರು ಬದಲಿಸಿಕೊಂಡಿದ್ದು, ಇದೀಗ ಮಾಜಿ ಮುಸ್ಲಿಂ ಎಂದೇ ಖ್ಯಾತಿ ಪಡೆದಿದ್ದ ಎನ್ನಲಾಗಿದೆ.31 ವರ್ಷಗಳ ಹಿಂದೆ ಉದ್ಯಮಿಯೊಬ್ಬರ 13 ವರ್ಷ ವಯಸ್ಸಿನ ಮಗನನ್ನು ಈತ ಕೊಲೆ ಮಾಡಿದ್ದ. ಅಪಹರಣ, ಸುಲಿಗೆ ಹಾಗೂ ಕೊಲೆ ಆರೋಪದಡಿ ಈತನಿಗೆ 1997ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ಮೇಲ್ಮನವಿ ಮೂಲಕ ಮಧ್ಯಂತರ ಜಾಮೀನು ಪಡೆದಿದ್ದ ಸಲೀಮ್‌ ಜೈಲಿಂದ ಹೊರಬಂದು ಬಳಿಕ ನಾಪತ್ತೆಯಾಗಿದ್ದ. ಇದೀಗ ಈತನನ್ನು ಬಂಧಿಸಲಾಗಿದೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *