Breaking News

ಸುಲ್ತಾನಗಂಜ್ ಪುರಸಭೆಯಲ್ಲಿ ಗುಂಡಿನ ದಾಳಿ; ಇಒ ಸಾವು, ಅಧ್ಯಕ್ಷರ ಸ್ಥಿತಿ ಗಂಭೀರ

ಭಾಗಲ್ಪುರ, ಏಪ್ರಿಲ್ 28: ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿರುವ ಸುಲ್ತಾನಗಂಜ್ ಪುರಸಭೆ ಕಚೇರಿಯಲ್ಲಿ ಇಂದು ಹಗಲು ಹೊತ್ತಿನಲ್ಲಿಯೇ ಮನಬಂದಂತೆ ಗುಂಡು ಹಾರಿಸಿದ ಘಟನೆ ನಡೆದಿದೆ. ಈ ದಾಳಿಯಲ್ಲಿ ಪುರಸಭೆ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಭೂಷಣ್ ಕುಮಾರ್ ಸಾವನ್ನಪ್ಪಿದ್ದು, ಅಧ್ಯಕ್ಷ ರಾಜ್‌ಕುಮಾರ್ ಗುಡ್ಡು ಗಂಭೀರವಾಗಿ ಗಾಯಗೊಂಡಿದ್ದಾರೆ.ಈ ಘಟನೆ ಇಡೀ ಪ್ರದೇಶದಲ್ಲಿ ಆತಂಕ ಉಂಟುಮಾಡಿತು. ಬುಲೆಟ್ ಬೈಕ್​ಗಳಲ್ಲಿ ಬಂದ ಐವರು ದಾಳಿಕೋರರು ಯಾವುದೇ ಮುನ್ಸೂಚನೆ ನೀಡದೆ ಗುಂಡು (firing) ಹಾರಿಸಿದರು. ಸಿಇಒ ಮತ್ತು ಅಧ್ಯಕ್ಷರ ಮೇಲೆ ಗುಂಡು ಹಾರಿಸಲಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಪ್ರಕರಣದ ತನಿಖೆಗಾಗಿ ಹಲವಾರು ತಂಡಗಳನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

Share News

About BigTv News

Check Also

ವಿದ್ಯಾರ್ಥಿನಿಗೆ ಮೊಬೈಲ್ ನಂಬರ್ ಕೊಟ್ಟು ಅನುಚಿತ ವರ್ತನೆ : ಪಿಡಿಒ ವಿರುದ್ಧ ಪೋಕ್ಸೋ ಕೇಸ್ ದಾಖಲು

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮ ಪಂಚಾಯಿತಿ ಪಿಡಿಒ ವಿವೇಕ್ ತೇಜಸ್ವಿ ವಿರುದ್ಧ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ …

Leave a Reply

Your email address will not be published. Required fields are marked *