Breaking News

ವರ್ಗಾವಣೆಗೊಂಡ ಶಾಲಾ ಶಿಕ್ಷಕಿ, ಗಳಗಳನೆ ಕಣ್ಣೀರ ಇಟ್ಟ ಮಕ್ಕಳು,

ಧಾರವಾಡ ; ವರ್ಗಾವಣೆಗೊಂಡ ಹುಬ್ಬಳ್ಳಿಯ ಹೆಬಸೂರು ಶಾಲೆಯ ಪ್ರಧಾನ ಗುರುಮಾತೆಗೆ ವಿದ್ಯಾರ್ಥಿನಿಯರು ಕಣ್ಣೀರು ಸುರಿಸುತ್ತಾ ವಿದಾಯ ಹೇಳಿದ್ದಾರೆ. ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ಕಣ್ಣೀರ ಕೋಡಿ ಹರಿದಿದೆ‌. ಶಾಲೆಯ ಪ್ರಧಾನ ಗುರುಮಾತೆ ರತ್ನಾ ಗ್ರಾಮಪುರೋಹಿತ ಅವರ ವರ್ಗಾವಣೆಯಾಗಿತ್ತು. ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಮರು ಹೊಂದಾಣಿಕೆ ವರ್ಗಾವಣೆ ಅಧಿನಿಯಮದ ಅಡಿಯಲ್ಲಿ ಕುಂದಗೋಳಕ್ಕೆ ವರ್ಗಾವಣೆ ಮಾಡಿದೆ. ಶಾಲೆಯಿಂದ ಹೊರಟಿದ್ದ ಶಿಕ್ಷಕಿ ರತ್ನಾ ಅವರನ್ನು ವಿದ್ಯಾರ್ಥಿನಿಯರು ಸುತ್ತುವರಿದಿದ್ದಾರೆ. ಗಳಗಳನೆ ಅತ್ತು ಕಣ್ಣೀರ ಕೋಡಿ ಹರಿಸಿದ್ದಾರೆ. ಶಾಲೆ ಬಿಟ್ಟುಹೋಗದಂತೆ ಶಿಕ್ಷಕಿಗೆ ವಿದ್ಯಾರ್ಥಿನಿಯರು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದ ದೃಶ್ಯ ಹೃದಯಸ್ಪರ್ಶಿಯಾಗಿತ್ತು.

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *