ಕೊಲ್ಲೂರು ನಿವಾಸಿ ರಾಕೇಶ್ ಶೇಟ್ (30) ಅವರು ಪತ್ನಿ ಹಾಗೂ ಮಗುವಿನೊಂದಿಗೆ ಕಾರಿನಲ್ಲಿ ಕೊಲ್ಲೂರಿನಿಂದ ಕಂಡ್ಲೂರಿಗೆ ಮದುವೆಗೆ ತೆರಳುತ್ತಿದ್ದಾಗ ಚಿತ್ತೂರು ಸರ್ಕಲ್ ಬಳಿಯ ಮುಖ್ಯ ರಸ್ತೆಯಲ್ಲಿ ಇನ್ನೊಂದು ಕಾರಿನ ಚಾಲಕ ದಾರಿ ಬಿಡುವ ವಿಷಯದಲ್ಲಿ ರಾಕೇಶ ಶೇಟ್ ಜತೆಗೆ ಜಗಳವಾಡಿದ್ದಾನೆ. ರಾಕೇಶರ ಕಾರನ್ನು ಅಡ್ಡಗಟ್ಟಿ, ಇತರ ಮೂವರೊಂದಿಗೆ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಲ್ಲದೆ, ಕಾರಿನ ಮುಂಭಾಗದ ಎರಡು ಕನ್ನಡಿ ಹಾಗು ಗ್ಲಾಸನ್ನು ಒಡೆದು ಜಖಂಗೊಳಿಸಲಾಗಿದೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ನೀಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

