Breaking News

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಏ. 24 ರಂದು ಐ-ಗ್ಯಾಟ್ ಟೆಸ್ಟ್

ಹುಬ್ಬಳ್ಳಿ: ಇಂಪಲ್ಸ್ ಪ್ರಿ ಯುನಿವರ್ಸಿಟಿ ಸೈನ್ಸ್ ಕಾಲೇಜು ವತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 24 ರಂದು ಐ-ಗ್ಯಾಟ್ ಟೆಸ್ಟ್ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಚೇರ್ಮನ್ ಮಧುಸೂದನ್ ವಸಿಷ್ಠ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕೊರೋನಾ ಕಾರಣಾಂತರಗಳಿಂದ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೂಳಿದಿದ್ದು, ಅಲ್ಲದೇ ವಿದ್ಯಾರ್ಥಿಗಳ ಪಾಲಕರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ದಿಸೆಯಲ್ಲಿ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಇಂಪಲ್ಸ್ ಕಾಲೇಜು ವತಿಯಿಂದ ಗೋಲ್ಡನ್ ಅವಾರ್ಡ್ ಟೆಸ್ಟ್ ಹಮ್ಮಿಕೊಳ್ಳಲಾಗಿದೆ ಎಂದರು.

ಏ.21, 22 & 23 ರಂದು ಸಂಪನ್ಮೂಲ ವ್ಯಕ್ತಿಗಳಿಂದ ತರಭೇತಿ ನೀಡಲಾಗುವುದು. ಇದರಲ್ಲಿ ಅತಿ ಹೆಚ್ಚು ಅಂಕಗಳಿಸುವ ಮೂವತ್ತು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಸರ್ಕಾರದ ಶುಲ್ಕದಂತೆ ಪ್ರವೇಶಾತಿ ನೀಡಲಾಗುವುದು. ನಂತರ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಉಚಿತವಾಗಿ ನೀಟ್, ಜೀ, ಕೆವಿಪಿವಾಯ್, ಕೆ-ಸಿಇಟಿ ಪರೀಕ್ಷೆ ತರಭೇತಿ ನೀಡಲಾಗುವುದು ಎಂದರು.

ಆಸಕ್ತ ವಿದ್ಯಾರ್ಥಿಗಳು ಏ. 23 ರೊಳಗಾಗಿ ನೊಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7618734756, 9880375799, 8904075981 ಗೆ ಕರೆ ಮಾಡಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದ್ ಯೂಸೂಫ್, ಶ್ರೀಕಾಂತ್ ಪಠಾಣ್, ನೂಸಹತ್ ಫಾತಿಮ್ಮಾ ಬಾರ್ಚೆವಾಲೆ ಸೇರಿದಂತೆ ಮುಂತಾದವರು ಇದ್ದರು.

Share News

About admin

Check Also

ಬೆಳಗಾವಿಯಲ್ಲಿ ‘ಕರ್ನಾಟಕ ಬಂದ್’ಗೆ ಅಭೂತಪೂರ್ವ ಬೆಂಬಲ : ಧಾರವಾಡದಲ್ಲಿ ನಿಷೇಧಾಜ್ಞೆ ಜಾರಿ

ಬೆಳಗಾವಿ/ಧಾರವಾಡ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಉತ್ತರ ಕರ್ನಾಟಕದಾದ್ಯಂತ ವ್ಯಾಪಕ ಬೆಂಬಲ …

Leave a Reply

Your email address will not be published. Required fields are marked *