Breaking News

ಸಿ.ಹೆಚ್. ಕಲಬೆರಿಕೆ ಹೆಂಡ ಮಾರಾಟ ; ಗಡಿಪಾರು

ರಾಯಚೂರು ಉಪ ವಿಭಾಗದ ವ್ಯಾಪ್ತಿಯಲ್ಲಿ ಸಿ.ಹೆಚ್. ಕಲಬೆರಕೆ ಹೆಂಡ ಮಾರಾಟದಲ್ಲಿ ಭಾಗಿಯಾಗ ರೂಡಿಗತ ಆರೋಪಿಗಳಾದ ವಾಹೀದ್ @ಚುಮಟಿ ತಂದೆ ಬರ್ಷಿದ್ (56) ಹಾಗೂ ಹುಸೇನಿ @ರವಿ ತಂದೆ ಮಾರೆಪ್ಪ (32) ಇವರನ್ನು ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ 55(ಎ) (ಬಿ) ಅಡಿಯಲ್ಲಿ ರಾಯಚೂರು ಉಪ ವಿಭಾಗೀಯ ದಂಡಾಧಿಕಾರಿಗಳಾದ ಡಾ.ಹಂಪಣ್ಣ ಸಜ್ಜನ್ ಅವರು ಮೇ.04ರಂದು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ವಾಹೀದ್ @ಚುಮಟಿ ತಂದೆ ಬರ್ಷಿದ್ (56) ಆರೋಪಿಯನ್ನು ಬೀದರ್ ಜಿಲ್ಲೆಯ ಔರಾದ (ಬಿ) ತಾಲೂಕಿನ ಸಂತಪೂರು ಪೋಲಿಸ್ ಠಾಣೆಯ ವ್ಯಾಪ್ತಿಗೆ ಹಾಗೂ ಹುಸೇನಿ @ರವಿ ತಂದೆ ಮಾರೆಪ್ಪ (32) ಬೀದರ್ ಜಿಲ್ಲೆಯ ಔರಾದ (ಬಿ) ತಾಲೂಕಿನ ಚಿಂತಕಿ ಪೋಲಿಸ್ ಠಾಣೆಯ ವ್ಯಾಪ್ತಿಗೆ ದಿನಾಂಕ: 05-05-2026 ರಿಂದ 05-08-2026ರವರೆಗೆ (ಮೂರು ತಿಂಗಳು) ಬೀದರ್ ಜಿಲ್ಲೆಗೆ ಗಡಿಪಾರು ಮಾಡಿಲಾಗಿದ್ದು, ಆರೋಪಿಗಳು ಆಯಾ ಪೋಲಿಸ್ ಠಾಣೆಯ ಠಾಣಾಧಿಕಾರಿಯವರ ಮುಂದೆ ಪ್ರತಿ ವಾರಕ್ಕೊಮ್ಮೆ ತಪ್ಪದೇ ಹಾಜರಾಗಬೇಕೆಂದು ರಾಯಚೂರು ಉಪ ವಿಭಾಗೀಯ ದಂಡಾಧಿಕಾರಿಗಳಾದ ಡಾ.ಹಂಪಣ್ಣ ಸಜ್ಜನ್ ಅವರು ಆದೇಶ ಹೊರಡಿಸಿದ್ದಾರೆ.

Share News

About BigTv News

Check Also

6ನೇ ತರಗತಿ ಮೇಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಮುಂಡಗೋಡ: ಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ 65 ವರ್ಷದ ಇಸ್ಮಾಯಿಲ್ ಹುಲಗೂರ …

Leave a Reply

Your email address will not be published. Required fields are marked *