Breaking News

ಕೊಡಿಗೇನಹಳ್ಳಿ: ಸರ ಕದ್ದ ಮಹಿಳೆ ಬಂಧನ

ಕೊಡಿಗೇನಹಳ್ಳಿ: ಚಿನ್ನದ ಸರ ಕದ್ದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದುಪುರದ ಸುಜಾತಮ್ಮ ಶುಕ್ರವಾರ ಬೆಳಿಗ್ಗೆ ದೊಡ್ಡ ಹೊಸಹಳ್ಳಿಗೆ ಜಾತ್ರೆಗೆಂದು ಬಸ್‌ನಲ್ಲಿ ಹೋಗುತ್ತಿದ್ದಾಗ ಕೊಡಿಗೇನಹಳ್ಳಿ ಬಸ್ ನಿಲ್ದಾಣದಲ್ಲಿ ವಾಂತಿಯಾಗಿದೆ. ಆ ಸಂದರ್ಭದಲ್ಲಿ ಕತ್ತಿನಲ್ಲಿದ್ದ ನೆಕ್ಲೇಸ್ ಕೆಳಗೆ ಬಿದ್ದಿರುವುದು ತಿಳಿದಿರಲಿಲ್ಲ. ಸ್ವಲ್ಪ ದೂರ ಮುಂದೆ ಹೋದ ಮೇಲೆ ನೆಕ್ಲೇಸ್ ಇಲ್ಲದಿರುವುದು ಗೊತ್ತಾದ ತಕ್ಷಣ ಕೊಡಿಗೇನಹಳ್ಳಿಗೆ ವಾಪಸ್‌ ಬಂದು 16 ಗ್ರಾಂನ ನೆಕ್ಲೇಸ್‌ ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಅನುಮಾನಾಸ್ಪದವಾಗಿ ಕಂಡುಬಂದ ಗುಟ್ಟೆ ಗ್ರಾಮದ ಲಕ್ಷ್ಮಮ್ಮ ಅವರನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಅವರ ಬಳಿ ನೆಕ್ಲೇಸ್‌ ಪತ್ತೆಯಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *