Breaking News

ಹುಬ್ಬಳ್ಳಿಯಲ್ಲಿ ಅಮರ್ ಚಲನಚಿತ್ರ ತಂಡದಿಂದ ವಿಜಯಯಾತ್ರೆ

ಹುಬ್ಬಳ್ಳಿಯಲ್ಲಿ ಅಮರ್ ಚಲನಚಿತ್ರ ತಂಡದಿಂದ ವಿಜಯಯಾತ್ರೆ ನಡೆಯಿತು. ಕೆಎಲ್‌ಇ ಸಂಸ್ಥೆಯ ಬಿವಿಬಿ ಕಾಲೇಜಿನ ಆಡಿಟೋರಿಯಂನಲ್ಲಿ ಚಿತ್ರ ತಂಡದೊಂದಿಗೆ ವಿದ್ಯಾರ್ಥಿಗಳ ಸಂವಾದ ಏರ್ಪಡಿಸಲಾಗಿತ್ತು. ಸಂಸದೆ ಸುಮಲತಾ, ಚಿತ್ರದ ನಾಯಕ ನಟ ಅಭಿಷೇಕ, ರಾಕ್‌ಲೈನ್ ವೆಂಕಟೇಶ್, ನಾಗಶೇಖರ್, ದೊಡ್ಡಣ್ಣ ಮತ್ತು ಯೋಗರಾಜ್‌ ಭಟ್ ಉಪಸ್ಥಿತರಿದ್ದರು. ಚಿತ್ರದ ಟ್ರೈಲರ್ ವೀಕ್ಷಿಸಿದ ವಿದ್ಯಾರ್ಥಿಗಳು ಅಭಿಷೇಕ್‌ ಮತ್ತು ಅಂಬರೀಷ್ ನಟನೆಯ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ರು. ಸಂಸದೆ ಸುಮಲತಾ ಅವರು ವೇದಿಕೆಗೆ ಬರುತ್ತಿದ್ದಂತೆ, ನಿಖಿಲ್ ಎಲ್ಲಿದೀಯಪ್ಪ, ನಿಖಿಲ್ ಎಲ್ಲಿದೀಯಪ್ಪ ಎಂದು ಕೂಗಿದ್ರು. ಚಿತ್ರ ತಂಡಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ರು. ಅಭಿಷೇಕ್‌ ಮತ್ತು ಯೋಗರಾಜ್‌ ಭಟ್‌ ಅವರು ಹಾಡು ಹಾಡಿ ಮತ್ತು ಚಲನಚಿತ್ರದ ಡೈಲಾಗ್‌ಗಳನ್ನು ಹೇಳಿ ನೆರೆದಿದ್ದವರನ್ನು ರಂಜಿಸಿದ್ರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ಸುಮಲತಾ, ಉತ್ತರ‌ ಕರ್ನಾಟಕದ ಜನರು ಮಂಡ್ಯಕ್ಕೆ ಬಂದು ನನ್ನ ಪರ ಚುನಾವಣಾ ಪ್ರಚಾರ ಮಾಡಿದ್ದಾರೆ. ಮನಸಲ್ಲೇ ನನಗೆ ಮತಹಾಕಿ ಆಶೀರ್ವದಿಸಿದ್ದಾರೆ. ಅಮರ್ ಚಲನಚಿತ್ರದಲ್ಲಿ ಪರಿಸರದ ಕುರಿತು ಉತ್ತಮ ಸಂದೇಶವಿದೆ. ಕನ್ನಡಿಗರು ಅಮರ್ ಚಲನಚಿತ್ರವನ್ನು ನೋಡಬೇಕು. ಪುತ್ರ ಅಭಿಷೇಕ್‌ಗೆ ಪ್ರೋತ್ಸಾಹಿಸಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದ್ರು.

Share News

About admin

Check Also

ಧಾರವಾಡ:ಮತಾಂತರಕ್ಕೆ ಒತ್ತಾಯ, ಮಹಿಳೆಯರ ಬಂಧನ!!

ಧಾರವಾಡದಲ್ಲಿ ಮನೆ ಮನೆಗೆ ತೆರಳಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸುತ್ತಿದ್ದ ಮೂವರು ಮಹಿಳೆಯರನ್ನು ಹಿಡಿದ ವಿಶ್ವ ಹಿಂದೂ ಪರಿಷತ್ …

Leave a Reply

Your email address will not be published. Required fields are marked *