ಹುಬ್ಬಳ್ಳಿ: ಮಳೆ ಬಾರದೇ ಇದ್ದರೇ ಜನರು ಕಂಗಾಲಾಗುತ್ತಾರೆ. ಆದರೆ ಹುಬ್ಬಳ್ಳಿಗೆ ಮಳೆ ಬಂದರೇ ಏನಾದರೂ ಒಂದು ಅವಾಂತರ ಆಗುವುದಂತೂ ಖಂಡಿತ. ಗಣಪತಿ ಪ್ರತಿಷ್ಟಾಪನೆ ಮಾಡಿರುವಲ್ಲಿಯೇ ಮಳೆಯಿಂದ ಚರಂಡಿ ನೀರು ನುಗ್ಗಿದ್ದು, ಸಂಪೂರ್ಣ ಜಲಾವೃತವಾಗಿದೆ.ಹೌದು.. ಹುಬ್ಬಳ್ಳಿಯ ತುಳಜಾ ಭವಾನಿ ಸರ್ಕಲ್ ಬಳಿಯಲ್ಲಿರುವ ಗಣೇಶ ಮಂಟಪಕ್ಕೆ ಮಳೆಯ ನೀರು ಹಾಗೂ ಚರಂಡಿ ನೀರು ನುಗ್ಗಿದ್ದು, ಅವ್ಯವಸ್ಥೆ ಸೃಷ್ಟಿಯಾಗಿದೆ. ಈಗಾಗಲೇ ಅವಳಿನಗರದಲ್ಲಿ ಇಂತಹ

ಸಾಕಷ್ಟು ಸಮಸ್ಯೆಗಳಿವೆ. ಹೀಗಿದ್ದರೂ ಕೂಡ ಸ್ಥಳೀಯ ಆಡಳಿತ ಮಂಡಳಿ ಹಾಗೂ ಮಹಾನಗರ ಪಾಲಿಕೆ ಸೂಕ್ತ ಕ್ರಮಗಳನ್ನು ಜರುಗಿಸದೇ ಇರುವ ಕಾರಣ ಗಣಪತಿ ಮಂಟಪಕ್ಕೆ ನೀರು ನುಗ್ಗಿರುವುದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.ಒಟ್ಟಿನಲ್ಲಿ ಮಳೆಯ ಅವಾಂತರವೋ ಅಥವಾ ಪಾಲಿಕೆಯ ನಿರ್ಲಕ್ಷ್ಯವೋ ಗಣಪತಿ ಮಾತ್ರ ಚರಂಡಿ ನೀರಿನ ವಾಸನೆಯಲ್ಲಿಯೇ ಕುಳಿತುಕೊಳ್ಳುವಂತಾಗಿದ್ದು, ಈ ಬಗ್ಗೆ ಮಹಾನಗರ ಪಾಲಿಕೆ ಸೂಕ್ತ ಕ್ರಮಗಳನ್ನು ಜರುಗಿಸಿ ಅವ್ಯವಸ್ಥೆಗೆ ಬ್ರೇಕ್ ಹಾಕಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

