Breaking News

ಹಾಸನ: ಅಪ್ರಾಪ್ತ ಮಗನಿಗೆ ಚಲಾಯಿಸಲು ಕಾರು ಕೊಟ್ಟ ತಂದೆಗೆ ₹25 ಸಾವಿರ ದಂಡ

ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಚಲಾಯಿಸಲು ವಾಹನ ನೀಡಿದ್ದ ತಂದೆಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಎಂ.ಎಸ್. ಶಶಿಕಲಾ ಅವರು ₹ 25 ಸಾವಿರ ದಂಡ ವಿಧಿಸಿದ್ದಾರೆ.ಡಿಸೆಂಬರ್ 14 ರಂದು ಮಾದಿಹಳ್ಳಿ ಹೋಬಳಿ ಇ. ಹೊಸಳ್ಳಿ ಗ್ರಾಮದ 15 ವರ್ಷದ ಯೋಗಿನ್ ತನ್ನ ತಂದೆಗೆ ಸೇರಿದ ಮಾರುತಿ ಆಲ್ಟೋ ಕಾರನ್ನು ಪಟ್ಟಣದ ನೆಹರುನಗರದಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ.ಈ ವೇಳೆ ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ಪರಿಶೀಲಿಸಿದ್ದು, ಯೋಗಿನ್‌ ತಂದೆ ಜಯಣ್ಣ ವಿರುದ್ಧ ಪ್ರಕರಣ ದಾಖಲಿಸಿದ್ದರು. ಡಿಸೆಂಬರ್ 17ರಂದು ಇಲ್ಲಿನ ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶೆ ಎಂ.ಎಸ್. ಶಶಿಕಲಾ ಅವರು ದಂಡ ವಿಧಿಸಿ ಆದೇಶಿಸಿದ್ದಾರೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *