ಜಾಲಹಳ್ಳಿ: ಸಮೀಪದ ವಂದಲಿ ಗ್ರಾಮದಲ್ಲಿ ಕಳ್ಳರು ಮನೆಯೊಂದರ ಬೀಗ ಮುರಿದು 10 ಗ್ರಾಂ ಚಿನ್ನ, ₹50 ಸಾವಿರ ನಗದು ಕಳವು ಮಾಡಿದ್ದಾರೆ. ಅಲಾಮ್ ಖಾನ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಅಲಾಮ್ ಖಾನ್ ಅವರು ರಾಯಚೂರಿನ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಕರ ಆರೋಗ್ಯ ವಿಚಾರಿ ಸಿಕೊಂಡು ಬರಲು ಹೋಗಿದ್ದರು. ಯಾರೂ ಇಲ್ಲದ್ದನ್ನು ಗಮನಿಸಿ, ಕಳ್ಳರು ಮನೆ ಬೀಗ ಮುರಿದು ಕಳವು ಮಾಡಿದ್ದಾರೆ. ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪಿಎಸ್‌ಐ ವೈಶಾಲಿ ಝಳಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

