Breaking News

ಆಸ್ತಿ ವಿಚಾರ : ಮಗನಿಂದ ತಂದೆಗೆ ಹಲ್ಲೆ

ಕುಂದಾಪುರ: ಮನೆ ಮಾರಿ ಹಣ ಕೊಡುವಂತೆ ಒತ್ತಾಯಿಸಿ ತಂದೆಯ ಮೇಲೆ ಮಗ ಹಲ್ಲೆ ನಡೆಸಿ, ಅವಾಚ್ಯವಾಗಿ ಬೈದಿರುವ ಘಟನೆ ಬಳ್ಕೂರಿನಲ್ಲಿ ಸಂಭವಿಸಿದೆ. ಬಳ್ಕೂರಿನ ರಘು ಪೂಜಾರಿ (68) ಹಲ್ಲೆಗೊಳಗಾದವರು. ಅವರ ಪುತ್ರ ನವೀನ್ ಆರೋಪಿ. ರಘು ಬಳ್ಕೂರಿನ 5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದು, ಪುತ್ರ ಹಾಗೂ ಪುತ್ರಿಯ ಮದುವೆಗೆ ಸೊಸೈಟಿಯಲ್ಲಿ ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಹರಾಜಿಗೆ ಬಂದಿದ್ದು, ಆಗ ಪುತ್ರಿ ಪ್ರಮೀಳಾ ಅವರು ತಮ್ಮ ಸ್ವಂತ ಹಣದಿಂದ ಸಾಲ ತೀರಿಸಿದ್ದರು. ಅನಂತರ ರಘು ಅವರು ಆ ಮನೆಯನ್ನು ಪುತ್ರಿಯ ಹೆಸರಿಗೆ ಮಾಡಿಕೊಟ್ಟಿದ್ದರು. ಇದೇ ವಿಚಾರವಾಗಿ ಪುತ್ರ ನವೀನ್ ಮನೆ ಮಾರಿ ಹಣ ಕೊಡುವಂತೆ ತಂದೆಯನ್ನು ಪೀಡಿಸುತ್ತಿದ್ದ. ಅನೇಕ ಬಾರಿ ಹಲ್ಲೆಗೈದಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅವರು ಎಚ್ಚರಿಕೆಯನ್ನು ಸಹ ನೀಡಿದ್ದರು. ಮೇ 9 ರಂದು ಮನೆಗೆ ಅಕ್ರಮವಾಗಿ ನುಗ್ಗಿದ ನವೀನ್ ತನಗೆ ಬೈದು, ಹಲ್ಲೆ ಮಾಡಿ, ತಾಯಿ, ಸಹೋದರಿಗೂ ಬೆದರಿಕೆ ಹಾಕಿರುವುದಾಗಿ ರಘು ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ರಘು ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *