Breaking News

ಆನ್‌ಲೈನ್‌ ಗೇಮಿಂಗ್‌ ಹೆಸರಲ್ಲಿ ಭಾರೀ ಮೋಸ; ಗೇಮ್ಸ್‌ ಕ್ರಾಫ್ಟ್‌ ಮೇಲೆ ಇ.ಡಿ ದಾಳಿ, ₹526 ಕೋಟಿ ವಶಕ್ಕೆ

ಬೆಂಗಳೂರು (ಮೇ.15): ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ಗ್ರಾಹಕರಿಗೆ ಭಾರಿ ಮೋಸ ಮಾಡಿದ್ದ ಕಂಪನಿಯಾದ ಗೇಮ್ಸ್‌ ಕ್ರಾಫ್ಟ್‌ ಟೆಕ್ನಾಲಜಿಗೆ ಸೇರಿದ್ದ ಬೆಂಗಳೂರು, ದೆಹಲಿಯ 17 ಸ್ಥಳಗಳ ಮೇಲೆ ಹಾಗೂ ನಿರ್ದೇಶಕರ ನಿವಾಸ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, 526 ಕೋಟಿ ರು.ಮೌಲ್ಯದ ಚರಾಸ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಕಂಪನಿಯ ಮೂವರನ್ನು ಬಂಧಿಸಿ 3.5 ಕೋಟಿ ರು. ಮೌಲ್ಯದ 2.5 ಕೆ.ಜಿ ಚಿನ್ನ ಮತ್ತು ವಜ್ರದ ಆಭರಣ ಮತ್ತು 11 ಲಕ್ಷ ನಗದು ಸೇರಿ 526.49 ಕೋಟಿ ಮೌಲ್ಯದ ಚರಾಸ್ತಿ ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ಹೇಳಿದೆ. ಆನ್‌ಲೈನ್‌ ರಮ್ಮಿ ಗೇಮಿಂಗ್‌ ಸಂಸ್ಥೆಗೆ ದೇಶಾದ್ಯಂತ 3 ಕೋಟಿ ಬಳಕೆದಾರರಿದ್ದಾರೆ. ರಿಯಲ್‌ ಮನಿ ಗೇಮಿಂಗ್‌ ನಿಷೇಧವಿರುವ ರಾಜ್ಯಗಳಲ್ಲೂ ಸೇವೆ ನೀಡಿದೆ. ಆದರೆ ಬಾಟ್‌ಗಳ ವಿರುದ್ಧ ಆಡಿ ₹1154 ಕೋಟಿ ಹಣವನ್ನು ಬಳಕೆದಾರರು ಕಳೆದುಕೊಂಡಿದ್ದರು. ಹೀಗಾಗಿ ಇ.ಡಿ. ತನಿಖೆ ನಡೆಸುತ್ತಿದೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *