ನಿವೃತ ಸೈನಿಕ ತಲೆಗೆ ಕಬ್ಬಿಣದ ರಾಡ್ ಇಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರ್ಗಿಯ ರಾಮಮಂದಿರ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ರವಿಚಂದ್ರ ಖೇಡ್ (45) ಎಂದು ತಿಳಿದುಬಂದಿದೆ. ಇಂಡಿಯನ್ ಆಯಿಲ್ ಡಿಪೋದಲ್ಲಿ ರವಿಚಂದ್ರ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ವಿವಾದಿತ ಖಾಸಗಿ ಜಾಗದಲ್ಲಿ ರವಿಚಂದ್ರವಾಗಿ ಕೊಲೆಯಾಗಿದ್ದಾರೆ. ವಿವಾದಿತ ಜಾಗದಲ್ಲಿ ಕಳೆದ ತಿಂಗಳು ಟಿನ್ ಶೆಡ್ ನಿರ್ಮಿಸಲಾಗಿತ್ತು. ಅದನ್ನು ವಿರೋಧಿ ಗುಂಪು ರಾತ್ರೋರಾತ್ರಿ ಜೆಸಿಬಿ ಇಂದ ಕೆಡವಲಾಗಿತ್ತು. ಅದೇ ವಿಚಾರವಾಗಿ ವಿರೋಧಿ ಗುಂಪಿನಿಂದ ರವಿಚಂದ್ರನ ಕೊಲೆಯಾಗಿದೆ. ನೈಟ್ ಶಿಫ್ಟ್ ನಲ್ಲಿ ರವಿಚಂದ್ರನ್ ಸೆಕ್ಯೂರಿಟಿ ಗಾರ್ಡ್ ಆಗಿದ್ದರು. ಕಂಡವರ ಜಾಗಕ್ಕೆ ಬೇಲಿ ಹಾಕುವ ಗ್ಯಾಂಗ್ ನಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳೆದ 4 ವರ್ಷದ ಹಿಂದೆ ರವಿಚಂದ್ರ ಬಿಎಸ್‌ಎಫ್ ನಿಂದ ನಿವೃತ್ತಿಯಾಗಿದ್ದರು. ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಹಡಲಗಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

