ಹುಬ್ಬಳ್ಳಿಯಲ್ಲಿ ಹೊಸ ಮೊಬೈಲ್ ಕೊಡಿಸುವಂತೆ ಕೇಳಿದ್ದ ಕಾರ್ಮಿಕನಿಗೆ ಸಾಲದ ಹಣ ನೆನಪಿಸಿ ಬುದ್ಧಿವಾದ ಹೇಳಿದ ಕಟ್ಟಡ ನಿರ್ಮಾಣ ಮೇಸ್ತ್ರಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಛಬ್ಬಿ ಗ್ರಾಮದ ದಾದಾಪೀರ್ ಕೊಲ್ಕರ್ (38) ಕೊಲೆಯಾದವರು. ಅವರ ಬಳಿಯೇ ಕೆಲಸ ಮಾಡುತ್ತಿದ್ದ ಅಜೀಂ ಜಮಖಾನೆ ಎಂಬಾತನೇ ಆರೋಪಿ ಎನ್ನಲಾಗಿದೆ. ₹25 ಸಾವಿರ ಸಾಲ ವಾಪಸ್ ಕೊಡದೆ, ಕೆಲಸಕ್ಕೂ ಸರಿಯಾಗಿ ಬಾರದ ಹಿನ್ನೆಲೆ ದಾದಾಪೀರ್ ಮೊಬೈಲ್ ಕೊಡಿಸಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಅಜೀಂ, ರೇವಡಿಹಾಳ ಗ್ರಾಮದ ಬಳಿ ದಾದಾಪೀರ್ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

