ಹುಬ್ಬಳ್ಳಿ: ಬಿಜೆಪಿಯಿಂದ ಶಹರ ಠಾಣೆ ಎದುರು ಪ್ರತಿಭಟನೆ ಹಿನ್ನೆಲೆಯಲ್ಲಿ ಠಾಣೆಗೆ ಭೇಟಿ ನೀಡಿದ ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ.ಭದ್ರತೆಯ ಸಿದ್ಧತೆ ವೀಕ್ಷಣೆ ಹಿರಿಯ ಅಧಿಕಾರಿಗಳ ಜೊತೆಗೆ ಭದ್ರತೆ ಬಗ್ಗೆ ಚರ್ಚೆ೭ಮೊಬೈಲ್ ಕಮಾಂಡರ್ ಸೆಂಟರ್ ನಲ್ಲಿ ಪ್ರತಿಭಟನಾಕಾರರ ಚಲನವಲನ ವೀಕ್ಷಣೆಮಾಡಿದರು. ಪೊಲೀಸ್ ಠಾಣೆ ಎದುರು ಬಿಜೆಪಿ ಬೃಹತ್ ಪ್ರತಿಭಟನೆ ಹಿನ್ನೆಲೆ. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಸೂಚನೆ ನೀಡಿದ್ದಾರೆ.ಪ್ರತಿಭಟನೆಗೆ
ಬಿಜೆಪಿ ಯಾವುದೇ ಅನುಮತಿ ಪಡೆದಿಲ್ಲ.ಪೊಲೀಸ್ ಠಾಣೆ ಎದುರು ಬಿಜೆಪಿಯವರು ಪ್ರತಿಭಟನೆಗೆ ಟೆಂಟ್ ಹಾಕಿದ್ದಾರೆ.ಪ್ರತಿಭಟನೆ ಹಿನ್ನೆಲೆಯಲ್ಲಿ ಅಗತ್ಯ ಭದ್ರತೆಕೈಗೊಳ್ಳಲಾಗಿದೆ.ಕಮಿಷನರೇಟ್ ವ್ಯಾಪ್ತಿಯ 2 ಸಾವಿರ ಸಿಬಿಂದಿ ನಿಯೋಜಿಸಲಾಗಿದೆ.ಅಶೋಕ್ ನೇತೃತ್ವದಲ್ಲಿ ಮೆರವಣಿಗೆ ಮಾಡುವ ಬಗ್ಗೆ ಮಾಹಿತಿ ಇಲ್ಲ ಎಂದರು.
ಪೊಲೀಸ್ ಇನ್ಸ್ಪೆಕ್ಟರ್ ಅಮಾನತ್ತು ಬೇಡಿಕೆ ಸೇರಿ ಯಾವುದೇ ಮಾಹಿತಿ ನಮಗೆ ಲಭ್ಯವಿಲ್ಲ. ಶ್ರೀಕಾಂತ್ ಪೂಜಾರಿ ವಿರುದ್ಧ 16 ಪ್ರಕರಣಗಳಿವೆ.ಸಾರಾಯಿ ಮಾರಾಟ, ಮಟಕಾ ಸೇರಿ ವಿವಿಧ ಪ್ರಕರಣ ದಾಖಲಾಗಿವೆ. ಹಿನ್ನೆಲೆಯಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.ರೇಣುಕಾ ಸುಕುಮಾರ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





