ರಾಜ್ಯ ಸರ್ಕಾರ ಶರಣಾದ ನಕ್ಸಲರಿಗೆ ಪುನರ್ವಸತಿ ಹಾಗೂ ಇನಾಮು ಘೋಷಣೆ ಮಾಡಿರುವ ಬೆನ್ನಲ್ಲೇ ಛತ್ತೀಸ್ ಗಢದ ಬಿಜಾಪುರದಲ್ಲಿ ೪೧ ನಕ್ಸಲರು ಶರಣಾಗಿದ್ದಾರೆ.1.19 ಕೋಟಿ ಇನಾಮು ಘೋಷನೆಯಾಗಿದ್ದ 31 ಮಂದಿ ಸೇರಿ 41 ನಕ್ಸಲರು ಬಿಜಾಪುರದಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ.ಶರಣಾದವರಲ್ಲಿ ನಾಲ್ವರು ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ ಬೆಟಾಲಿಯನ್ ನಂ.1 ಹಾಗೂ ಮಾವೋವಾದಿ ಸಂಘಟನೆಗಳ ಸದಸ್ಯರು, ಪ್ರದೇಶ ಸಮಿತಿಯ ಮೂವರು, 11 ಜನ ಪ್ಲಟೂನ್ ಮತ್ತುಪ್ರದೇಶ ಸಮಿತಿ ಸದಸ್ಯರು, ಇಬ್ಬರು ಪಿಎಲ್ ಜೆ ಎ ಸದಸ್ಯರು ನಾಲ್ವರು ಮಿಲಿಟಿಯಾ ಪ್ಲಟೂನ್ ಕಮಾಂಡರ್ ಗಳು, ಒಬ್ಬ ಉಪ ಕಮಾಂಡರ್ ಸೇರಿದಂತೆ ಒಟ್ಟು 41 ಜನರಿದ್ದಾರೆ. ಶರಣಾದ ನಕ್ಸಲರು ಸಂವಿಧಾನದಲ್ಲಿ ನಂಬಿಕೆ ಇರುವುದಾಗಿ, ಪ್ರಜಾಪ್ರಭುತ್ವ ಚೌಕಟ್ಟಿನೊಳಗೆ ಘನತೆಯಿಂದ ಮತ್ತು ಸುರಕ್ಷಿತ ಜೀವನ ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

