Breaking News

ವಾಮಾಚಾರ, ಮಾಟಮಂತ್ರದ ಆರೋಪದ ಮೇಲೆ ಹಲ್ಲೆ – ಪತಿ ಸಾವು, ಪತ್ನಿ ಸ್ಥಿತಿ ಗಂಭೀರ!

ಗುಜರಾತ್ ರಾಜ್ಯದ ಸಾಬರಕಾಂಠಾ ಜಿಲ್ಲೆಯ ವಿಜಯನಗರ ತಾಲೂಕಿನ ಗಾಡಿವಕ್ಡಾ ಗ್ರಾಮದಲ್ಲಿ ಮೂಢನಂಬಿಕೆಯಿಂದ ನಡೆದ ಭೀಕರ ಹಲ್ಲೆಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ. ಗ್ರಾಮದ ಕಮಲಾಬೇನ್ ಎಂಬ ಮಹಿಳೆಯನ್ನು ‘ಡಾಕಣ್’ ಎಂದು ಸುಳ್ಳು ವದಂತಿ ಹಬ್ಬಿಸಿ, ಗ್ರಾಮ ತೊರೆಯುವಂತೆ ಒತ್ತಾಯಿಸಲಾಗಿತ್ತು. ಪರಿಸ್ಥಿತಿ ಉದ್ವಿಗ್ನಗೊಂಡಾಗ ಗ್ರಾಮಸ್ಥರ ಗುಂಪು ಕಮಲಾಬೇನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿ, ಹಲ್ಲೆಗೆ ಮುಂದಾಯಿತು. ಪತ್ನಿಯನ್ನು ರಕ್ಷಿಸಲು ಹೋದ ಪತಿ ಮನುಭಾಯಿ ರಾಮ್‌ಜೀಭಾಯಿ ದಾಮೋರ್ ಮೇಲೆ ತೀಕ್ಷ್ಣ ಆಯುಧಗಳಿಂದ ದಾಳಿ ನಡೆಸಲಾಗಿದ್ದು, ತಲೆಗೆ ಗಂಭೀರ ಗಾಯವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ 12 ಮಂದಿಯ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದು, ಆರೋಪಿಗಳಲ್ಲಿ ಎಂಟು ಪುರುಷರು ಹಾಗೂ ನಾಲ್ಕು ಮಹಿಳೆಯರು ಸೇರಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *