ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮುದಾಯದಿಂದ ಶಾಂತಿ ನಡಿಗೆ ಮೆರವಣಿಗೆ. ಪ್ರತಿ ವರ್ಷ ಈದ್ ಮಿಲಾದ್ ಹಬ್ಬದಂದು ನಡೆಯುತ್ತಿದ್ದ ಮೆರವಣಿಗೆ.ನಿನ್ನೆ ಹುಬ್ಬಳ್ಳಿಯಲ್ಲಿ ಸಾರ್ವತ್ರಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ಇದ್ದ ಹಿನ್ನಲೆ ಇಂದು ಮೆರವಣಿಗೆ ಮಾಡಲಾಯಿತು ನಗರದಲ್ಲಿ ಶಾಂತಿ ಹಾಗೂ ಸೌಹಾರ್ದತೆಯೂ ನೆಲೆಸಲು ಒಂದು ದಿನ ಮೆರವಣಿಗೆ ಮುಂದುಡ್ಡಿದ್ದ ಅಂಜುಮನ್ ಹಾಗು ಮುಸ್ಲಿಂ ಸಮುದಾಯದ ನಾಯಕರು.
ಈ ವರ್ಷ ಒಂದು ದಿನ ತಡವಾಗಿ ನಡೆದ ಶಾಂತಿ ಸಂದೇಶದ ಮೆರವಣಿಗೆ.ಮೆರವಣಿಗೆಯ ದಾರಲ್ ಉಲ್ಲಮ್ ಗೌಸಿಯಾದಿಂದ ಪ್ರಾರಂಭಿಸಿದರು.ಯಲ್ಲಾಪೂರ ಓಈ
ಪೆಂಡಾರಗಲ್ಲಿ ,ದುರ್ಗದಬೈಲ್ .ಮುಲ್ಲಾ ಓಣಿ,ಕೌಲ ಪೇಟ್ , ನ್ಯೂ ಇಂಗ್ಲಿಷ್ ಸ್ಕೂಲ್ ಮುಖಾಂತರ ಮೆರವಣಿಗೆ ನಡೆಯಿತು.ಹಳೆ ಹುಬ್ಬಳ್ಳಿಯ ಆಸಾರ ಮೊಹಲ್ಲಾದಲ್ಲಿ ಪ್ರವಾದಿಗಳ ಕೇಶ (ಕೂದಲು) ದರ್ಶನದೊಂದಿಗೆ ಮೆರವಣಿಗೆ ವಿದಾಯ ಮಾಡಲಾಯಿತು.ಈ ಶಾಂತಿ ನಡಿಗೆಯಲ್ಲಿ ಅಂಜುಮನ್ ಅಧ್ಯಕ್ಷ ಮಹಮ್ಮದ್ ಯೂಸುಫ್ ಸವಣೂರ ಹಾಗು ಮಾಜಿ ಶಾಸಕ ಹಿಂಡಸಗೇರಿ ,ಮಾಜಿ ಸಂಸದ ಪ್ರೋ: ಐ ಜಿ ಸನದಿ, ಶಾಸಕ ಪ್ರಸಾದ್ ಅಬ್ಬಯ್ಯ ಹಾಗು ಅಲ್ತಾಫ್ ಕಿತ್ತೂರ ,ಸದಾನಂದ ಡಂಗನವರ ಭಾಗಿಯಾಗಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

