ಹುಬ್ಬಳ್ಳಿ : ನಗರದ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ರಾಣಿ ಚೆನ್ನಮ್ಮ ಮೈದಾನ, ಗಜಾನನ ಉತ್ಸವ ಸಮಿತಿಯ ಸದಸ್ಯರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಗೋಪಾಲಕೃಷ್ಣ ಅವರಿಗೆ ಮರುಮನವಿ ಸಲ್ಲಿಸಿದರು. ಅಲ್ಲದೇ ಅನುಮತಿ ನೀಡಲು 3 ದಿನದ ಗಡವು ನೀಡಲಾಗಿತು. ಇದೇ ವೇಳೆ ಆಯುಕ್ತರು ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ಗಜಾನನ ಉತ್ಸವ ಮಂಡಳಿಯ ಮುಖಂಡರು ಒತ್ತಾಯಿಸಿದರು. ಅಲ್ಲದೇ ಶಾಂತಿ ಸೌಹಾರ್ದತೆಯಿಂದ ಗಣೇಶೋತ್ಸವವನ್ನು ಎಲ್ಲಾ ಸಮುದಾಯದವರು ಆಚರಿಸೋಣ ಎಂದು ಮನವಿ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

