ಮಂಗಳೂರು ಪೊಲೀಸ್ ಕಮಿಷನರೆಟ್ ನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದೇರಳಕಟ್ಟೆ ಯೆನಪೋಯ ಆಸ್ಪತ್ರೆ ಹಿಂಭಾಗದಲ್ಲಿ ಇಕ್ಬಾಲ್ ಸಿಕ್ಕ್ಲಗರ್ (23), ಮುಕ್ಕಚೇರಿ ಬಳಿ ಉಳ್ಳಾಲ ಮಾಸ್ತಿಕಟ್ಟೆಯ ಫಝಲ್ ಹುಸೈನ್ (33)ರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂದರ್ ನ ಗ್ರೀನ್ ಪಾರ್ಕ್ ಬಳಿ ಕಂಡತ್ ಪಳ್ಳಿಯ ಮಹಮ್ಮದ್ ಜುನೈದ್ ಅಲಿಯಾಸ್ ಜುನ್ನಿ (32) ಮತ್ತು ಕುದ್ರೋಳಿ ಕರ್ಬಲಾ ರೋಡ್ ನಿವಾಸಿ ಮೊಹಮ್ಮದ್ ಫಾಯಿಕ್ (32 ರನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಪ್ಪಿನಮೊಗರು ಕಡೇಕಾರ್ ನ ನೇತ್ರಾವತಿ ಸೇತುವೆ ಕೆಳಗೆ ಉಳ್ಳಾಲ ಚೆಂಬುಗುಡ್ಡೆಯ ಮೊಹಮ್ಮದ್ ಸಜಾದ್ (29) ಎಂಬಾತನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

