ಹುಬ್ಬಳ್ಳಿ : ಪಂಚಮಸಾಲಿ ಸಮಾಜದ 2ಎ ಹಾಗೂ ಲಿಂಗಾಯತ ಎಲ್ಲ ಸಮಾಜಗಳನ್ನು ಕೇಂದ್ರ ಸರ್ಕಾರ ಒಬಿಸಿ ಮಿಸಲಾತಿಗೆ ಸೇರ್ಪಡಿಸುವಂತೆ ಹಕ್ಕೊತ್ತಾಯ ನೀಡಬೇಕೆಂದು ಒತ್ತಾಯಿಸಿ ಹುಬ್ಬಳ್ಳಿಯ ನೆಹರೂ ಮೈದಾನದಿಂದ ಕಿತ್ತೂರ ಚೆನ್ನಮ್ಮ ವೃತ್ತದವರೆಗೆ ಲಿಂಗಾಯತ ಸಮಾಜ ಸಾವಿರಾರು ಜನರು ಬೃಹತ್ ಪ್ರತಿಭಟನೆ ಮಾಡಿದರು.
ಲಿಂಗಾಯತ ಸಮಾಜಕ್ಕೆ ಮೀಸಲಾತಿ ಕೊಡುವ ವಿಷಯಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿಗಳು ನಾಲ್ಕನೇ ಬಾರಿ ಮಾತು ಕೊಟ್ಟಿದ್ದರು. ಇನ್ನೂವರೆಗೂ ಈ ಬಗ್ಗೆ ವಿಚಾರ ತಗದಿಲ್ಲಾ ಎಂದು ವಿರೋಧಿಸಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಗರದ ಚನ್ನಮ್ಮ ವೃತ್ತದಿಂದ ನೆಹರು ಮೈದಾನದ ವರೆಗೆ ರ‌್ಯಾಲಿ ಮಾಡುವುದರ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು. ಈ ಸಮಾವೇಶದಲ್ಲಿ ಹಲವಾರು ಜಿಲ್ಲೆಗಳಿಂದ ಲಿಂಗಾಯತ ಸಮಾಜದ ಸಾವಿರಾರು ಜನರು ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





