ಶಬರಿಮಲೆ: ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆಯಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಸೋಮವಾರ ಸಂಜೆ ಅಯ್ಯಪ್ಪಸ್ವಾಮಿ ಮಕರಜ್ಯೋತಿ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಿದರು. ಜ್ಯೋತಿ ದರ್ಶನಕ್ಕೆ ಲಕ್ಷಾಂತರ ಅಯ್ಯಪ್ಪ ಭಕ್ತರು ಆಗಮಿಸಿದ್ದರು. ತಿರುವಾಭರಣ ಘಟ್ಟ ಮುಗಿದ ನಂತರ ಪೊನ್ನಂಬಲಮೇಡು ಪರ್ವತದ ಶಿಖರದಲ್ಲಿ ಮಕರಜ್ಯೋತಿ ದರ್ಶನವಾಯಿತು.
ಈ ಸಂದರ್ಭದಲ್ಲಿ ‘ಸ್ವಾಮಿಯೇ ಶರಣಂ ಅಯ್ಯಪ್ಪಾ’ ಎಂದು ಶಬರಿಗಿರಿಯರು ಜೈಕಾರ ಹಾಕಿದರು. ಲಕ್ಷಾಂತರ ಭಕ್ತರು ಮಕರಜ್ಯೋತಿಯನ್ನು ನೇರವಾಗಿ ನೋಡಿ ಪುಳಕಿತರಾದರು. ಕೋಟಿಗಟ್ಟಲೆ ಜನ ಟಿವಿಯಲ್ಲಿ ನೋಡಿ ಪುನೀತರಾದರು. ಜ್ಯೋತಿ ದರ್ಶನದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ನಂಬಿಕೆಯೋ, ಪವಾಡವೋ ತಿಳಿಯದು ಆದರೆ ಮಕರ ಸಂಕ್ರಮಣ ದ ದಿನ ತಿರುಮಲ ಬೆಟ್ಟದಲ್ಲಿ ಮಕರ ಜ್ಯೋತಿಯ ದರ್ಶನ ಆಗುತ್ತೆ. ಇದನ್ನು ನೋಡಲು ಸಹಸ್ರಾರು ಶಬರಿ ಭಕ್ತರು ಬರುತ್ತಾರೆ ಆದರೆ ಅಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ಸಹಸ್ರಾರು ಪೊಲೀಸರು ನಿಂತಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





