Breaking News

ಕರ್ತವ್ಯ ಆ್ಯಪ್‌ಗೆ ಖಾಕಿ ಕಿಡಿ..! | 24×7 ಡ್ಯೂಟಿ ಪೊಲೀಸರಿಗೆ ಹೊಸ ಹಾಜರಾತಿ ತಲೆನೋವುಹಾಜರಾತಿ ಕಡ್ಡಾಯಕ್ಕೆ ಪೊಲೀಸರ ವಿರೋಧ..!

ಕರ್ತವ್ಯ ಆ್ಯಪ್‌ಗೆ ಪೊಲೀಸರ ನೋ ಎಂಟ್ರಿ! | ಖಾಕಿಗೆ ಹೊಸ ರೂಲ್ಸ್‌ ಮೇಲೆ ಆಕ್ರೋಶ…

ಖಾಕಿಗೆ ಕರ್ತವ್ಯ ಆ್ಯಪ್ ಶಾಕ್! | 15-18 ಗಂಟೆ ದುಡಿದರೂ ಲೆಕ್ಕವಿಲ್ಲ..?

ಪೊಲೀಸರ ಸಹನೆ ಪರೀಕ್ಷಿಸುತ್ತಿದೆಯಾ ಸರ್ಕಾರ..? | ಕರ್ತವ್ಯ ಆ್ಯಪ್ ವಿರುದ್ಧ ಅಸಮಾಧಾನ ಸ್ಫೋಟ

ಕರ್ತವ್ಯ ಆ್ಯಪ್‌ಗೆ ಖಾಕಿ ಅಪಸ್ವರ!

ಹೊಸ ಹಾಜರಾತಿ ವ್ಯವಸ್ಥೆಗೆ ಪೊಲೀಸರ ವಿರೋಧ – ಅನನುಕೂಲಗಳ ಪಟ್ಟಿ ಸರ್ಕಾರಕ್ಕೆ ಸಲ್ಲಿಕೆ..

ಬೆಂಗಳೂರು: ಸರ್ಕಾರಿ ನೌಕರರ ಹಾಜರಾತಿ ಮೇಲ್ವಿಚಾರಣೆಗೆ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ‘ಕರ್ತವ್ಯ’ ಆ್ಯಪ್ ಇದೀಗ ಪೊಲೀಸ್ ಇಲಾಖೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ…

ಬೆಳಗ್ಗೆ ಹಾಗೂ ಸಂಜೆ ಕಡ್ಡಾಯ ಆನ್‌ಲೈನ್ ಹಾಜರಾತಿ ದಾಖಲಿಸುವ ವ್ಯವಸ್ಥೆ, 24 ಗಂಟೆಯೂ ಕರ್ತವ್ಯದಲ್ಲಿರುವ ಪೊಲೀಸರಿಗೆ ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ಅಧಿಕಾರಿ ಮತ್ತು ಸಿಬ್ಬಂದಿ ವಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ…

ಮೇ 1ರಿಂದ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮಗಳು ಹಾಗೂ ಮಂಡಳಿಗಳ ಸಿಬ್ಬಂದಿಗೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ. ಅದರಂತೆ ಸಿಬ್ಬಂದಿ ಬೆಳಿಗ್ಗೆ ಕಚೇರಿಗೆ ಆಗಮಿಸುವಾಗ ಚೆಕ್-ಇನ್ ಮತ್ತು ಸಂಜೆ ತೆರಳುವಾಗ ಚೆಕ್-ಔಟ್ ಮಾಡಬೇಕಾಗಿದೆ…

ಆದರೆ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬೇರೆ ಇಲಾಖೆಗಳಿಂದ ಸಂಪೂರ್ಣ ವಿಭಿನ್ನವಾಗಿದೆ. ಪೊಲೀಸರಿಗೆ ನಿಗದಿತ ಸಮಯ ಎನ್ನುವುದೇ ಇಲ್ಲ. ಮಧ್ಯರಾತ್ರಿ ಗಸ್ತು, ತುರ್ತು ಬಂದೋಬಸ್ತ್, ಅಪರಾಧ ತನಿಖೆ, ಹೊರರಾಜ್ಯ ಪ್ರವಾಸ—ಇವೆಲ್ಲವೂ ಕರ್ತವ್ಯದ ಭಾಗ. ಇಂತಹ ಸಂದರ್ಭದಲ್ಲಿ ನಿಗದಿತ ಸಮಯಕ್ಕೆ ಹಾಜರಾತಿ ದಾಖಲಿಸುವುದು ಹೇಗೆ ಎಂಬ ಪ್ರಶ್ನೆ ಸಿಬ್ಬಂದಿಯಿಂದ ಕೇಳಿಬರುತ್ತಿದೆ…

ಇದಲ್ಲದೆ, ಸಾಮಾನ್ಯ ಸರ್ಕಾರಿ ನೌಕರರಂತೆ ಭಾನುವಾರ ಅಥವಾ ಹಬ್ಬದ ರಜೆಗಳು ಪೊಲೀಸರಿಗೆ ಸಿಗುವುದಿಲ್ಲ. ಹಬ್ಬ, ಚುನಾವಣೆ, ವಿಐಪಿ ಭೇಟಿ ಮುಂತಾದ ಸಂದರ್ಭಗಳಲ್ಲಿ ಹೆಚ್ಚುವರಿ ಕೆಲಸದ ಒತ್ತಡ ಇರುತ್ತದೆ. ಆದರೆ ಆ ಹೆಚ್ಚುವರಿ ಕರ್ತವ್ಯವನ್ನು ಆ್ಯಪ್‌ನಲ್ಲಿ ದಾಖಲಿಸಿ ಅದರ ಆಧಾರದ ಮೇಲೆ ಭತ್ಯೆ ಅಥವಾ ಹೆಚ್ಚುವರಿ ವೇತನ ನೀಡುವ ವ್ಯವಸ್ಥೆಯೇ ಇಲ್ಲ ಎನ್ನುವುದು ಪೊಲೀಸರ ಅಸಮಾಧಾನ…

ಆಧಾರ್ ಕಡ್ಡಾಯ ಯಾಕೆ..?
ಕರ್ತವ್ಯ ಆ್ಯಪ್‌ನಲ್ಲಿ ಆಧಾರ್ ವಿವರಗಳನ್ನು ಕಡ್ಡಾಯವಾಗಿ ಕೇಳಲಾಗುತ್ತಿರುವುದಕ್ಕೂ ಸಿಬ್ಬಂದಿ ಪ್ರಶ್ನೆ ಎತ್ತಿದ್ದಾರೆ. ಹಾಜರಾತಿ ದಾಖಲಿಸಲು ಆಧಾರ್ ಮಾಹಿತಿ ಏಕೆ ಅಗತ್ಯ ಎಂಬುದರ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ…

ಪೊಲೀಸರ ಆತಂಕಗಳೇನು..?
ಪೊಲೀಸರು ಹಲವೊಮ್ಮೆ 8 ಗಂಟೆಗಿಂತ ಹೆಚ್ಚು, ಕೆಲ ಸಂದರ್ಭಗಳಲ್ಲಿ 15–18 ಗಂಟೆಗಳವರೆಗೂ ನಿರಂತರ ಕರ್ತವ್ಯ ನಿರ್ವಹಿಸುತ್ತಾರೆ..

ಠಾಣೆಗೆ ಬರುವ ಮುನ್ನವೇ ನೇರವಾಗಿ ಅಪರಾಧ ಸ್ಥಳ ಅಥವಾ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಬೇಕಾಗಬಹುದು…

ಆ್ಯಪ್ ಕಚೇರಿ ಲೊಕೇಶನ್‌ ಮಾತ್ರ ಗುರುತಿಸಿದರೆ, ಫೀಲ್ಡ್‌ನಲ್ಲಿ ಇರುವ ಸಿಬ್ಬಂದಿ ಗೈರುಹಾಜರು ಎಂದು ದಾಖಲಾಗುವ ಸಾಧ್ಯತೆ ಇದೆ…

ಒಮ್ಮೆ ಹಾಜರಾತಿ ದಾಖಲಿಸಿದ ಬಳಿಕ ಎಡಿಟ್ ಮಾಡಲು ಅವಕಾಶ ಇಲ್ಲ ಎನ್ನುವುದು ಮತ್ತೊಂದು ಸಮಸ್ಯೆ..

ಪೊಲೀಸ್ ಸಿಬ್ಬಂದಿಯ ಅಭಿಪ್ರಾಯದಂತೆ, ಈ ವ್ಯವಸ್ಥೆಯನ್ನು ಹಾಗೇ ಜಾರಿಗೆ ತಂದರೆ ಪೊಲೀಸರು ಕರ್ತವ್ಯಕ್ಕಿಂತ ಹಾಜರಾತಿಯತ್ತ ಹೆಚ್ಚು ಗಮನ ಹರಿಸಬೇಕಾದ ಪರಿಸ್ಥಿತಿ ಉಂಟಾಗಬಹುದು. ಹೀಗಾಗಿ ಪೊಲೀಸ್ ಇಲಾಖೆಯ ವಿಶೇಷ ಕಾರ್ಯವೈಖರಿಯನ್ನು ಪರಿಗಣಿಸಿ ಪ್ರತ್ಯೇಕ ವ್ಯವಸ್ಥೆ ರೂಪಿಸಬೇಕು ಎಂಬ ಒತ್ತಾಯ ಜೋರಾಗಿದೆ.

Share News

About Shaikh BigTv

Check Also

ಕೊಲ್ಲೂರಿನಲ್ಲಿ 80 ಸಾವಿರ ರೂ. ಕಳವು: 24 ಗಂಟೆಯೊಳಗೆ ಮೂವರು ಕಳ್ಳಿಯರ ಬಂಧನ

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯ ವ್ಯಾನಿಟಿ ಬ್ಯಾಗ್‌ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಕೊಲ್ಲೂರು …

Leave a Reply

Your email address will not be published. Required fields are marked *