Breaking News

3 ವರ್ಷದ ಬಾಲಕಿ ‘ಅತ್ಯಾ’ಚಾರ ಪ್ರಕರಣ; 60 ದಿನದಲ್ಲಿ ಆರೋಪಿಗೆ ಮರಣದಂಡನೆ ವಿಧಿಸಿದ ಕೋರ್ಟ್‌

ಪುಣೆ: ಇತ್ತೀಚೆಗೆ ಬೆಳಕಿಗೆ ಬಂದಿದ್ದ ಅತ್ಯಾಚಾರ ಪ್ರಕರಣವೊಂದಕ್ಕೆ ಇದೀಗ ನ್ಯಾಯಾಲಯವೊಂದು ತಕ್ಕ ಪಾಠ ಕಲಿಸಿದೆ. ಮಹಾರಾಷ್ಟ್ರದ ಪುಣೆಯಲ್ಲಿ 3 ವರ್ಷ ಅಪ್ರಾಪ್ತ ಬಾಲಕಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಕಾಮುಕ ವೃದ್ಧನೊಬ್ಬ ಕೊಲೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣದ ಪ್ರಮುಖ ಆರೋಪಿ ಭೀಮರಾವ್‌ ಕಾಂಬಳೆ ಎಂಬಾತನಿಗೆ ವಿಶೇಷ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 3 ವರ್ಷದ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಇದೀಗ ಕೊನೆಗೂ ನ್ಯಾಯಾಲಯ ಮುಕ್ತಿ ಕೊಟ್ಟಿದೆ. ಅಚ್ಚರಿಯೆಂದರೆ ಘಟನೆ ನಡೆದು ಕೇವಲ 60 ದಿನಗಳಲ್ಲಿ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಕಂಬಿ ಹಿಂದೆ ಎಣಿಸುವಂತೆ ಮಾಡಿದ್ದಾರೆ. ಇನ್ನು ತ್ವರಿತ ವಿಚಾರಣೆ ನಡೆಸಿ ನ್ಯಾಯಾಲಯವು ಅಪ್ರಾಪ್ರ ಬಾಲಕಿ ಕೊಂದ ಕಾಮುಕ ವೃದ್ಧ ಭೀಮರಾವ್‌ ಕಾಂಬಳೆ ವಿರುದ್ಧ ಈ ಐತಿಹಾಸಿಕ ತೀರ್ಪು ನೀಡಿದೆ.

Share News

About BigTv News

Check Also

ಕೊಲ್ಲೂರಿನಲ್ಲಿ 80 ಸಾವಿರ ರೂ. ಕಳವು: 24 ಗಂಟೆಯೊಳಗೆ ಮೂವರು ಕಳ್ಳಿಯರ ಬಂಧನ

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯ ವ್ಯಾನಿಟಿ ಬ್ಯಾಗ್‌ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಕೊಲ್ಲೂರು …

Leave a Reply

Your email address will not be published. Required fields are marked *