Breaking News

ಮಾದಕ ವಸ್ತು ಸೇವನೆ: ಮೂರು ಮಂದಿ ಬಂಧನ

ಬೆಂಗಳೂರು: ಪೊಲೀಸ್ ಕಮಿಷನರೆಟ್ ನ ವಿವಿಧ ಠಾಣೆಗಳ ವ್ಯಾಪ್ತಿಯ ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಜೂ.29ರಂದು ಪೊಲೀಸರು ಬಂಧಿಸಿದ್ದಾರೆ. ಬಜಾಲ್ ಕ್ರಾಸ್ ರೋಡ್ ನಿಂದ ಫೈಸಲ್ ನಗರ ಕಡೆಗೆ ಹೋಗುವ ರಸ್ತೆ ಜಂಕ್ಷನ್ ಬಳಿ ದ್ವಿತಿನ್ ನನ್ನು ಕಂಕನಾಡಿ ನಗರ ಠಾಣೆ ಪೊಲೀಸರು, ನವಭಾರತ್ ವೃತ್ತದ ಬಳಿ ಅಶೋಕನಗರ ನಿವಾಸಿ ಪ್ರಜ್ವಲ್ ಬಿ.ಅಮೀನ್ (23) ನನ್ನು ಬಂದರು ಠಾಣೆ ಪೊಲೀಸರು, ಮೂಡುಶೆಡ್ಡೆ ಆಶ್ರಯನಗರ ಖಾಲಿ ಮೈದಾನದಲ್ಲಿ ಪಿಲಿಕುಳ ನಿಸರ್ಗಧಾಮದ ಬಳಿಯ ನಿವಾಸಿ ಮೊಹಮ್ಮದ್ ಶಾರೂಕ್ (30) ನನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *