Breaking News

ರಾಣೆಬೆನ್ನೂರು ದೇವರಗುಡ್ಡ ದೇವಸ್ಥಾನ ಹುಂಡಿ ಕಳ್ಳತನ, ಇಬ್ಬರು ಆರೋಪಿಗಳ ಪತ್ತೆ

ರಾಣೆಬೆನ್ನೂರು: ತಾಲ್ಲೂಕಿನ ದೇವರಗುಡ್ಡ ಮಾಲತೇಶ ದೇವಸ್ಥಾನದ ಪೂರ್ವ ದಿಕ್ಕಿನ ಮುಂದಿನ ಬಾಗಿಲ ಕದಕ್ಕೆ ಒಳಗಿನಿಂದ ಹಾಕಿದ್ದ ಸಲಾಕೆ ಒಡೆದು ದೇವಸ್ಥಾನದ ಒಳಗೆ ನುಗ್ಗಿ ಕಾಣಿಕೆ ಹುಂಡಿಯಲ್ಲಿದ್ದ ₹50 ಸಾವಿರ ಹಣ್ಣ ಕಳ್ಳತನ ಮಾಡಿದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನದ ಯತ್ನದ ವೇಳೆ ಕಾಣಿಕೆ ಹುಂಡಿಯಲ್ಲಿದ್ದ ಹಣ ದೇವಸ್ಥಾನದ ಒಳಭಾಗದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ದೇವಸ್ಥಾನಕ್ಕೆ ಅಳವಡಿಸಿದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿತರಾದ ದೇವರಗುಡ್ಡ ಗ್ರಾಮದ ಮಾರುತಿ ಭರಮಲಿಂಗಪ್ಪ ಕೆಂಗಲ್ಲ (22), ಅಶೋಕ ಹನುಮಂತಪ್ಪ ಹೊನಕೇರಿ ಉರ್ಫ ಕೋಡಿಹಳ್ಳಿ ಅವರು ದೇವಸ್ಥಾನದ ಒಳಗೆ ನುಗ್ಗಿದ ಬಗ್ಗೆ ಕಂಡು ಬಂದಿದೆ. ಇಬ್ಬರು ಆರೋಪಿತರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೇವಸ್ಥಾನ ಸಮಿತಿ ಮುಖ್ಯಸ್ಥ ಭರಮಪ್ಪ ಉರ್ಮಿ ಅವರು ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *