Breaking News

ಬೆಂಗಳೂರು| 2 ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ರೌಡಿಶೀಟರ್ ಕೊಲೆ: ನಾಲ್ವರ ಬಂಧನ

ಬೆಂಗಳೂರು: ದಾಸರಹಳ್ಳಿ ಸಮೀಪದ ಚೊಕ್ಕಸಂದ್ರದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ರೌಡಿಶೀಟರ್ ದೀಪು (31) ಕೊಲೆಯಾಗಿದ್ದಾನೆ. ಕಾರು ಚಾಲಕನಾಗಿದ್ದ ದೀಪು, ನಂದಿನಿ ಲೇಔಟ್‌ನಲ್ಲಿ ತಾಯಿಯೊಂದಿಗೆ ವಾಸವಾಗಿದ್ದ. ಭಾನುವಾರ ರಾತ್ರಿ ಆರೋಪಿಗಳು ಚಾಕುವಿನಿಂದ ಇರಿದು ದಾಳಿ ನಡೆಸಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಎರಡು ದಿನಗಳ ಹಿಂದೆ ದೀಪು, ಈಶ್ವರ್ ನೇಪಾಳಿ ಹಾಗೂ ಸುಮನ್ ಅಲಿಯಾಸ್ ಪಾರಿವಾಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದ್ದು, ಇದೇ ವಿಚಾರವಾಗಿ ದೀಪು ಮೇಲೆ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್, ದೇವರಾಜು, ಮಹಿಪಾಲ್ ಹಾಗೂ ರನ್ನ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿ ಪೂರ್ವಯೋಜಿತವಾಗಿತ್ತೇ ಅಥವಾ ಹಿಂದಿನ ಗಲಾಟೆಯ ಮುಂದುವರಿದ ಭಾಗವೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಯುವತಿಯರನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ಆರೋಪ

ಬಾಗಲಕೋಟೆ: ಯುವತಿಯರನ್ನು ಚುಡಾಯಿಸುತ್ತಿದ್ದುದನ್ನು ಪ್ರಶ್ನಿಸಿದ ಕಾರಣಕ್ಕೆ ಯುವಕನೊಬ್ಬನ ಮೇಲೆ ಕೆಲ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೆರೂರು ಪಟ್ಟಣದಲ್ಲಿ …

Leave a Reply

Your email address will not be published. Required fields are marked *