ಧಾರವಾಡದಲ್ಲಿ ಭೀಕರವಾದ ಕೊಲೆಯಾಗಿದ್ದು, ಹೆಲ್ಮೆಟ್ನಿಂದ ಹೊಡೆದು ಪತಿಯಿಂದಲೇ ಪತ್ನಿಯ ಕೊಲೆಯಾಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ತಾರಿಹಾಳದಲ್ಲಿ ಒಂದು ಕೊಲೆ ನಡೆದಿದೆ. ಪತ್ನಿ ನಾಗರತ್ನ ಹಳಿಮನಿ (19)ಯನ್ನು ಪತಿ ಶಿವರಾಜ್ ಕೊಲೆ ಮಾಡಿದ್ದಾನೆ. ಫೆಬ್ರುವರಿಲ್ಲಿ ಶಿವರಾಜ್ ಮತ್ತು ನಾಗರತ್ನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನವಲಗುಂದ ತಾಲೂಕಿನ ಇಬ್ರಾಹಿಂಪುರ ಗ್ರಾಮದ ನಾಗರತ್ನ ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ದಂಪತಿ ನಡುವೆ ಜಗಳ ಆಗಿತ್ತು ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಮೇಲೇ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದಾನೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

