Breaking News

ನಕಲಿ ನೋಟುಗಳ ಪತ್ತೆ, ಪ್ರತ್ಯೇಕ ನಾಲ್ಕು ಪ್ರಕರಣ ದಾಖಲು.

ಬೆಂಗಳೂರು ; ರಾಜ್ಯದಲ್ಲಿ ನಕಲಿ ನೋಟುಗಳ ಹಾವಳಿ ಮತ್ತೆ ಆರಂಭವಾಗಿದೆ. ಕಳೆದ ಎರಡು ದಿನಗಳ ಅಂತರದಲ್ಲಿ 100 ರೂಪಾಯಿ ಬೆಲೆಯ ಒಟ್ಟು 30 ನೋಟುಗಳು ಪತ್ತೆಯಾಗಿವೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ನಾಲ್ಕು ಎಫ್‌ಐಆರ್ ದಾಖಲಾಗಿದೆ.

ಆರ್ ಬಿಐ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ, ಕೆನರಾ, ಯುಬಿಐ ಬ್ಯಾಂಕ್ ಮ್ಯಾನೇಜರ್ ಗಳು ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ಉಡುಪಿ, ಮಣಿಪಾಲ, ಹುಬ್ಬಳ್ಳಿ ಹಾಗೂ ಮಲ್ಲೇಶ್ವರ ಬ್ರಾಂಚ್ ನ ಬ್ಯಾಂಕ್ ಗಳಲ್ಲಿ ನಕಲಿ ನೋಟು ಪತ್ತೆಯಾಗಿದ್ದವು. ಆರ್ ಬಿ ಐ ಗೆ ರಿಮೀಟ್ ಮಾಡುವ ಸಂದರ್ಭದಲ್ಲಿ ನಕಲಿ ನೋಟು ಪತ್ತೆಯಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಗೇಟ್ ಪೊಲೀಸರು ನಕಲಿ ನೋಟಿನ ಜಾಲದ ಹಿಂದೆ ಬಿದ್ದಿದ್ದಾರೆ

Share News

About BigTv News

Check Also

ಸಂಬಳ ಇದ್ದರೂ ಲಂಚಕ್ಕೆ ಕೈ ಹಾಕುವವರ ಪರಿಸ್ಥಿತಿ ಇದೇ..! ನೋಡ್ರಿ ಕೊನೆಗೆ ಏನಾಗುತ್ತೆ ಅಂತ!

ಸಂಬಳ ದಪ್ಪ… ಆದ್ರೆ ಲಂಚದ ಲಾಲಸೆ ತಪ್ಪಿಲ್ಲ..! ಕೊನೆಗೆ ಲೋಕಾಯುಕ್ತ ಬಲೆಗೆ ಬಿದ್ದು ಮಾನ ಹರಾಜು..! ಬೆಂಗಳೂರು ದಕ್ಷಿಣ ಜಿಲ್ಲಾ …

Leave a Reply

Your email address will not be published. Required fields are marked *