Breaking News

ರೈತರಿಗೆ ಸಮರ್ಪಕವಾಗಿ ನೀರು ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಿ: ಸಚಿವ ಬೋಸರಾಜು

ರಾಯಚೂರು: ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯ ಮೈಲ್ 69 ರಲ್ಲಿ 9 ಅಡಿ, ಮೈಲ್ 47 ರಲ್ಲಿ 12 ಅಡಿ ನೀರು ಸರಬರಾಜು ಆಗುವದರಿಂದ ಕೆಳಭಾಗದ ಮಾನ್ವಿ, ಸಿರವಾರ, ರಾಯಚೂರಿಗೆ ಸರಿಯಾಗಿ ನೀರು ಸರಬರಾಜಾಗುತ್ತಿಲ್ಲ ಶೀಘ್ರ ಮೈಲ್ 69, 47 ರಲ್ಲಿ ಸರಿಯಾದ ನೀರಿ‌ನ ಪ್ರಮಾಣವನ್ನು ಕಾಯ್ದಿರಿಸುವಂತೆ ಸಚಿವ ಎನ್ ಎಸ್ ಬೋಸರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು‌.
ಕೆಳಭಾಗಕ್ಕೆ ಸಮರ್ಪಕವಾಗಿ‌ ನೀರು ಸರಬರಾಜಾಗದ ಹಿನ್ನಲೆ‌ ಸಚಿವ ಎನ್‌ಎಸ್ ಬೋಸರಾಜು, ಶಾಸಕ ಹಂಪಯ್ಯ ನಾಯಕ ಹಾಗೂ ಸಂಸದರಾದ ಜಿ ಕುಮಾರ ನಾಯಕ ಅವರು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ನಂತರ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಿರವಾರದ ಪ್ರವಾಸಿ ಮಂದಿರದಲ್ಲಿ ರೈತರ ಸಮ್ಮುಖದಲ್ಲಿ ಕೂಲಂಕುಷವಾಗಿ ಮಾತನಾಡಿದರು. ನಂತರ ಮಸ್ಕಿಯ ಮೈಲ್ 69 ಕ್ಕೆ ಭೇಟಿ ನೀಡಿ‌ ನೀರಿನ ಪ್ರಮಾಣದ ವಾಸ್ತವತೆಯನ್ನು ಪರಿಶೀಲಿಸಿದರು.
ಇನ್ನು ಎರಡು ದಿನಗಳೊಳಗಾಗಿ ಕೆಳ ಭಾಗಕ್ಕೆ ನೀರು ತಲುಪಿಸಲು ಹಾಗೂ ಹಗಲು ರಾತ್ರಿ ನೀರಿನ ಪ್ರಮಾಣ ವ್ಯತ್ಯಾಸವಾಗದಂತೆ ವಿವಿಧ ಇಲಾಖೆಗಳ ಸಹಕಾರ ಪಡೆದು ಗೇಜ್ ಪ್ರಮಾಣ ಕಾಯ್ದಿರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿದರು. ಬೆಳೆದು ನಿಂತ ಬೆಳೆಗಳು ಬಾಡುತ್ತಿವೆ ಎಂದು ರೈತರು ಸಮರ್ಪಕ ನೀರು ಸರಬರಾಜಿಗಾಗಿ ಮನವಿ ಮಾಡುತ್ತಿದ್ದಾರೆ. ಶೀಘ್ರ ನೀರಿನ‌ ಪ್ರಮಾಣ ಕಾಯ್ದಿರಿಸಿ ಕೆಳಭಾಗದ ರೈತರಿಗೆ ನೀರು ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Share News

About BigTv News

Check Also

ಗಾಂಜಾ ಕೇಸ್: ಚಾರ್ಮಾಡಿ ನಿವಾಸಿಗೆ 5 ವರ್ಷ ‘ಕಠಿಣ’ ಶಿಕ್ಷೆ ವಿಧಿಸಿದ ಮಂಗಳೂರು ನ್ಯಾಯಾಲಯ

ಬೆಳ್ತಂಗಡಿ: ಸುಮಾರು ಒಂದೂವರೆ ದಶಕದ ಹಿಂದೆ ಉಜಿರೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ ಚಾರ್ಮಾಡಿ ನಿವಾಸಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯವು …

Leave a Reply

Your email address will not be published. Required fields are marked *