ನವದೆಹಲಿ : ಭಾರತೀಯ ಸ್ಟಾರ್ಟಪ್ ಉದ್ಯಮಕ್ಕೆ ಬರುತ್ತಿದ್ದ ಫಂಡಿಂಗ್ ಹಣಕಾಸು ವರ್ಷ 2023ರಲ್ಲಿ ಶೇ 70ರಷ್ಟು ಕುಸಿತ ಕಂಡು 15 ಶತಕೋಟಿ ಡಾಲರ್ಗೆ ತಲುಪಿದೆ. ಕಳೆದ ಹಣಕಾಸು ವರ್ಷ 2022ರಲ್ಲಿ ಸ್ಟಾರ್ಟಪ್ ಉದ್ಯಮದ ಫಂಡಿಂಗ್ ಗರಿಷ್ಠ ಮಟ್ಟಕ್ಕೇರಿ 50 ಶತಕೋಟಿ ಡಾಲರ್ಗೆ ತಲುಪಿತ್ತು. ಮಾರುಕಟ್ಟೆ ಸಂಶೋಧನಾ ಸಂಸ್ಥೆ ರೆಡ್‌ಸೀರ್‌ನ ವರದಿಯ ಪ್ರಕಾರ, ಬಂಡವಾಳ ಕುಸಿಯುತ್ತಿದ್ದಂತೆ, ಸ್ಟಾರ್ಟ್‌ಪ್‌ಗಳು ತಮ್ಮ ಖರ್ಚು ವೆಚ್ಚ ಕಡಿಮೆ ಮಾಡುತ್ತಿವೆ ಮತ್ತು ಲಾಭದಾಯಕತೆಯ ಹಾದಿಯನ್ನು ತ್ವರಿತಗೊಳಿಸುತ್ತಿವೆ.
ಬಂಡವಾಳ ವೆಚ್ಚ ಮತ್ತು ಬಡ್ಡಿದರಗಳ ವೆಚ್ಚಗಳಲ್ಲಿನ ಹೆಚ್ಚಳ, ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿನ ಹಿಂಜರಿತ, ಟೆಕ್ ಸ್ಟಾಕ್‌ಗಳ ಮೌಲ್ಯದಲ್ಲಿನ ಕುಸಿತ ಮತ್ತು ಗ್ರಾಹಕ ಇಂಟರ್ನೆಟ್ ಬೆಳವಣಿಗೆಯಲ್ಲಿನ ನಿಧಾನಗತಿಗಳ ಕಾರಣದಿಂದ ಸ್ಟಾರ್ಟಪ್ ಉದ್ಯಮಕ್ಕೆ ಫಂಡಿಂಗ್ ಸ್ಥಿರವಾಗಿ ಹರಿದು ಬರುತ್ತಿಲ್ಲ, ಎಂದು ರೆಡ್‌ಸೀರ್‌ನ ಪಾಲುದಾರ ಮೋಹಿತ್ ರಾಣಾ ಹೇಳಿದರು. 1 ಶತಕೋಟಿ ಡಾಲರ್ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ಸುಮಾರು 100 ಯುನಿಕಾರ್ನ್‌ಗಳು ಮತ್ತು 400ಕ್ಕಿಂತ ಕಡಿಮೆ ಸಾರ್ವಜನಿಕ ಕಂಪನಿಗಳು ದೇಶದಲ್ಲಿವೆ.ಸ್ಟಾರ್ಟಪ್ ಕಂಪನಿಗಳಲ್ಲಿ ಸಂಸ್ಥಾಪಕರ ಮಾಲೀಕತ್ವದ ಪಾಲನ್ನು ನೋಡುವುದಾದರೆ- ಶೇಕಡಾ 65 ರಷ್ಟು ಸಾರ್ವಜನಿಕ ಸ್ಟಾರ್ಟಪ್ ಕಂಪನಿಗಳಲ್ಲಿ (ಲಿಸ್ಟೆಡ್ ಕಂಪನಿಗಳು) ಸಂಸ್ಥಾಪಕರ ಮಾಲೀಕತ್ವದ ಪಾಲು ಶೇಕಡಾ 50ಕ್ಕಿಂತ ಜಾಸ್ತಿ ಇದ್ದರೆ, ಶೇಕಡಾ 59ರಷ್ಟು ಖಾಸಗಿ ಸ್ಟಾರ್ಟಪ್ ಕಂಪನಿಗಳಲ್ಲಿ ಸಂಸ್ಥಾಪಕರ ಮಾಲೀಕತ್ವದ ಪಾಲು ಶೇಕಡಾ ಸೊನ್ನೆಯಿಂದ 20ರಷ್ಟಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





