ಚಮಚಗಿರಿ–ಬಕೆಟ್ ಹಿಡಿಯುವ ಗ್ಯಾಂಗ್‌ಗೆ ಸಾಥ್ ಕೊಡುವ ಪೊಲೀಸ್..? ಕಾಪಾಡೋದು ಬೇಡ—ಸಸ್ಪೆಂಡ್ ಮಾಡಬೇಕು!
ಚಮಚಗಿರಿ–ಬಕೆಟ್ ಹಿಡಿಯುವ ಗ್ಯಾಂಗ್‌ಗಳಿಗೆ ಕಡಿವಾಣ ಹಾಕಲು ಖಡಕ್ ಆ್ಯಕ್ಷನ್ ತೆಗೆದುಕೊಳ್ಳಬೇಕು..
ಕೆಲವು ಪೊಲೀಸ್ ಠಾಣೆಗಳಲ್ಲಿ ನಡೆಯುತ್ತಿರುವ “ಚಮಚ-ಬಕೆಟ್ ದರ್ಬಾರ್” ಈಗ ಸಣ್ಣ ವಿಷಯವಲ್ಲ ಇದು ನೇರವಾಗಿ ಕಾನೂನು ವ್ಯವಸ್ಥೆಯ ಮೇಲೆ ಹೊಡೆತ ನೀಡುತ್ತಿರುವ ಗಂಭೀರ ಸ್ಥಿತಿ..
ಪೊಲೀಸ್ ಇಲಾಖೆಗೆ ಯಾವುದೇ ಸಂಬಂಧವಿಲ್ಲದ ಕೆಲವರು, ಚಮಚಗಿರಿ.. ಬಕೆಟ್ ಹಿಡಿಯುವುದನ್ನೇ ವೃತ್ತಿ ಮಾಡಿಕೊಂಡು, “ಸೆಟಲ್ ಮಾಡ್ತೀವಿ” ಎಂದು ಅಮಾಯಕರನ್ನು ಬಲೆಗೆ ಬೀಳಿಸಿ ಹಣ ವಸೂಲಿ ಮಾಡುತ್ತಿರುವುದು ಬಹಿರಂಗ ಸತ್ಯವಾಗಿದೆ…
ಒಂದು ಠಾಣೆಯಲ್ಲೇ ಮೂರು–ನಾಲ್ಕು ಜನರ ಗುಂಪು ಈ ರೀತಿಯ ಕೆಲಸದಲ್ಲಿ ತೊಡಗಿರುವುದು ಕಂಡು ಬಂದಿದೆ. ಠಾಣೆ ಸುತ್ತಮುತ್ತ ಅಡ್ಡಾಡುತ್ತಾ, ಪೊಲೀಸ್ ಹೆಸರನ್ನೇ ದುರುಪಯೋಗ ಮಾಡಿಕೊಂಡು ತಮ್ಮದೇ ದರ್ಬಾರ್ ನಡೆಸುತ್ತಿರುವುದು ಆತಂಕಕಾರಿ ಬೆಳವಣಿಗೆ…
ಇದರಲ್ಲೂ ಹೆಚ್ಚು ಗಂಭೀರ ಸಂಗತಿ ಏನೆಂದರೆ, ಕೆಲವೊಂದಿಷ್ಟು ಕ್ರೈಂ ಪೊಲೀಸರ ಟು-ವೀಲರ್, ಕಾರುಗಳಲ್ಲಿ ಇಂಥವರನ್ನು ಕೂರಿಸಿಕೊಂಡು ಅಡ್ಡಾಡಿಸುವುದು…
ಇದರಿಂದ ಇವರು ಪೊಲೀಸ್ ಪ್ರಭಾವದ ಹೆಸರಿನಲ್ಲಿ ಪುಟ್ಟ ಅಂಗಡಿಗಳು, ಹೋಟೆಲ್‌ಗಳು, ಪಾನ್ ಶಾಪ್‌ಗಳಲ್ಲಿ “ಇದು ಬೇಕು, ಅದು ಬೇಕು” ಎಂದು ಒತ್ತಾಯ ಮಾಡಿ ಸೆಟಲ್‌ಮೆಂಟ್ ದಂಧೆ ನಡೆಸುತ್ತಿರುವುದು ನಮ್ಮ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ…
ಇದು ಕೇವಲ ತಪ್ಪಲ್ಲ — ಇದು ಅಧಿಕಾರದ ದುರುಪಯೋಗ.. ಇದು ಕೇವಲ ಅಸಭ್ಯತೆ ಅಲ್ಲ — ಇದು ಕಾನೂನು ವ್ಯವಸ್ಥೆಗೆ ಅವಮಾನ…
ಅಮಾಯಕರಿಗೆ ಹೆದರಿಸಿ, ಬೆದರಿಸಿ, ಸುಳ್ಳು ಕಥೆಗಳನ್ನು ಕಟ್ಟಿಕೊಂಡು ನಿಮ್ಮ ಮೇಲೆ ಕೇಸ್ ಆಗುತ್ತದೆ” ಎಂದು ಭಯ ಹುಟ್ಟಿಸಿ ಹಣ ವಸೂಲಿ ಮಾಡುತ್ತಿರುವುದು ಇನ್ನಷ್ಟು ಗಂಭೀರ ಆರೋಪವಾಗಿದೆ…
ಇಲ್ಲಿ ಒಂದು ಮಹತ್ವದ ಸಂಗತಿ ಗಮನಿಸಬೇಕು:
ನಮ್ಮ ಕರ್ನಾಟಕ ಪೊಲೀಸ್ ಅಂದರೆ ಶಿಸ್ತು, ಪ್ರಾಮಾಣಿಕತೆ, ಗೌರವಕ್ಕೆ ಹೆಸರಾಗಿರುವ ಇಲಾಖೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅನೇಕ ಪೊಲೀಸರಿದ್ದಾರೆ. ಆದರೆ ಇಂತಹ ಕೆಲ ಬಳ್ಳಾಣಿಕೆಯಷ್ಟು ಪೊಲೀಸರು ಮಾಡುವ ತಪ್ಪುಗಳಿಂದಲೇ ಸಂಪೂರ್ಣ ಇಲಾಖೆಗೆ ಕಳಂಕ ಬರುತ್ತಿದೆ…

ಖಡಕ್ ಸಂದೇಶ ಪೊಲೀಸರಿಗೆ: ಇಂಥವರನ್ನು ವಾಹನಗಳಲ್ಲಿ ಕೂರಿಸಿಕೊಂಡು ಅಡ್ಡಾಡಿಸುವುದು ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಇಂಥ ಕೃತ್ಯದಲ್ಲಿ ಭಾಗಿಯಾಗಿರುವ ಪೊಲೀಸರ ಮೇಲೆ ತಕ್ಷಣ ಸಸ್ಪೆನ್ಷನ್ ಹಾಗೂ ಕಠಿಣ ಕ್ರಮ ಜರುಗಿಸಬೇಕು…
ಆಯುಕ್ತರಿಗೆ ಸ್ಪಷ್ಟ ಆಗ್ರಹ: ಇಂಥ ಚಮಚಗಿರಿ–ಬಕೆಟ್ ಹಿಡಿಯುವ ಗ್ಯಾಂಗ್‌ಗಳಿಗೆ ಕಡಿವಾಣ ಹಾಕುವುದರ ಜೊತೆಗೆ, ಪೊಲೀಸರೊಳಗಿನ ತಪ್ಪು ಮಾಡುವವರನ್ನೂ ಗುರುತಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ…
ಎಚ್ಚರಿಕೆ:ಇಂದು ಇದು ಸಣ್ಣ “ಸೆಟಲ್‌ಮೆಂಟ್” ಆಗಿರಬಹುದು…
ನಾಳೆ ಅದು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು…
ಇಂಥ ಪೊಲೀಸರನ್ನು ಕಾಪಾಡುವುದು ಅಲ್ಲ —ಅವರನ್ನೇ ಸಸ್ಪೆಂಡ್ ಮಾಡಬೇಕು! ಇಲ್ಲವಾದರೆ, ಮುಂದಾಗುವ ಅನಾಹುತಕ್ಕೆ ಯಾರು ಹೊಣೆ..? ಈ ಪ್ರಶ್ನೆಗೆ ಉತ್ತರ ಹೇಳಬೇಕಾಗುವುದು ಅದೇ ವ್ಯವಸ್ಥೆ… ಇದೀಗ ಮಾತು ಬೇಡ ಖಡಕ್ ಆ್ಯಕ್ಷನ್ ಬೇಕು!
ಜನರು ಕಾದು ನೋಡುತ್ತಿದ್ದಾರೆ… ಇನ್ನೂ ಮೌನ ಮುಂದುವರಿದರೆ — ಅದೇ ದೊಡ್ಡ ದುರಂತ!
ಇಂಥ ಚಮಚಗಿರಿ–ಬಕೆಟ್ ಗ್ಯಾಂಗ್‌ಗಳ ಮೇಲೆ ಹಾಗೂ ಅವರಿಗೆ ಸಾಥ್ ಕೊಡುವ ಪೊಲೀಸರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಗಟ್ಟಿಯಾದ ಒತ್ತಾಯವಾಗಿದೆ!”
bigtvnews | Hubli Dharwad News | Kannada News | Karnataka News Hubli News | News In Hubli | Local news

