ನೆಲಮಂಗಲ: ದಾಬಸ್‌ಪೇಟೆ ಪ್ರೇಮ್ ಶಿವ ಜ್ಯುವೆಲರ್ಸ್ ನಲ್ಲಿ ಗುರುವಾರ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿದ್ದು, ಅಂಗಡಿ ಮಾಲಿಕರ ಕಾಲಿಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗ್ರಾಹಕರಂತೆ ಬಂದ ಇಬ್ಬರು ದುಷ್ಕರ್ಮಿಗಳು 10 ಗ್ರಾಂ ಬೆಳ್ಳಿ ಖರೀದಿಸಿದ್ದು, ಬಳಿಕ ಮಾಲಿಕ ಕುನ್ನಾರಾಮ್ ಕೆಲಸಗಾರರನ್ನು ಊಟಕ್ಕೆ ಕಳುಹಿಸಿ, ತಾವು ಅಂಗಡಿಯ ಒಳಭಾಗಕ್ಕೆ ಊಟ ಮಾಡಲು ತೆರಳಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಅಂಗಡಿಗೆ ನುಗ್ಗಿ ಗನ್ ಹಿಡಿದು ಬೆದರಿಸಿದ್ದಾರೆ. ಮಾಲಿಕ ಪ್ರತಿರೋಧ ತೋರಿದ್ದರಿಂದ ಕಾಲಿಗೆ ಗುಂಡು ಹಾರಿಸಿ, ಭಯ ಸೃಷ್ಟಿಸಲು ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಿದ್ದಾರೆ. ಗಾಯಗೊಂಡ ಕುನ್ನಾರಾಮ್ ಜೋರಾಗಿ ಅರಚಿದ್ದರಿಂದ ಅಕ್ಕಪಕ್ಕದ ಅಂಗಡಿಯವರು, ಸಾರ್ವಜನಿಕರು ಸ್ಥಳಕ್ಕೆ ಬಂದಿದ್ದರಿಂದ ದುಷ್ಕರ್ಮಿಗಳು ಸ್ಥಳದಿಂದ ಬೊಲೆರೊ ವಾಹನದಲ್ಲಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

