Breaking News

ನಕಲಿ ದಾಖಲೆ ತಯಾರಿಸಿ ವಾಹನ ಮಾರಾಟ; 19 ವರ್ಷಗಳ ಬಳಿಕ ಆರೋಪಿಯ ಬಂಧನ

ಕಾಸರಗೋಡು ನಗರ: ವ್ಯಕ್ತಿ ಪಲ್ಲಟ ನಡೆಸಿ ನಕಲಿ ದಾಖಲೆ ತಯಾರಿಸಿ ವಾಹನ ಮಾರಾಟಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿ ಕರ್ನಾಟಕದ ಮೂಲ್ಕಿ ಹಳೆಯಂಗಡಿ ಚಂದ್ರಮೌಳೀಶ್ವರ ದೇವಸ್ಥಾನದ ಸಮೀಪದ ಗಣೇಶ್‌ ಶೆಟ್ಟಿ(50)ಯನ್ನು ಕಣ್ಣೂರು, ಕಾಸರಗೋಡು ರೇಂಜ್‌ ಕ್ರೈಂ ಬ್ರಾಂಚ್‌ ಎಸ್‌.ಪಿ ಕೆ.ವಿ.ವೇಣುಗೋಪಾಲ್‌ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾಸರಗೋಡು ಕ್ರೈಂ ಬ್ರಾಂಚ್‌ ಡಿವೈಎಸ್‌ಪಿ ಟಿ.ಮಧುಸೂದನನ್ 19 ವರ್ಷಗಳ ಬಳಿಕ ಬಂಧಿಸಿದರು. 2002 ರಲ್ಲಿ ಮಂಜೇಶ್ವರ ಪೊಲೀಸರು ಗಣೇಶ್‌ ಶೆಟ್ಟಿಯನ್ನು ಬಂಧಿಸಿದ್ದರು. ಜಾಮೀನು ಪಡೆದು ತಲೆಮರೆಸಿಕೊಂಡಿದ್ದನು. ಕ್ವಾಲಿಸ್‌ ವಾಹನವನ್ನು ನಕಲಿ ದಾಖಲು ತಯಾರಿಸಿ ವ್ಯಕ್ತಿಪಲ್ಲಟ ನಡೆಸಿ ಕರುಣಾಕರ ಭಂಡಾರಿ ಅವರಿಗೆ ಮಾರಾಟಗೈದು ಹಣ ಪಡೆದುಕೊಂಡಿದ್ದ. ಅನಂತರ ಬೇರೆ ವ್ಯಕ್ತಿಯ ವಾಹನವನ್ನು ನಕಲಿ ದಾಖಲೆ ತಯಾರಿಸಿ ತನಗೆ ಮಾರಾಟ ಮಾಡಿದ್ದಾಗಿ ತಿಳಿದು ಕರುಣಾಕರ ಭಂಡಾರಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದರು. 2007 ರಲ್ಲಿ ಈತನನ್ನು ನ್ಯಾಯಾಲಯ ತಲೆಮರೆಸಿಕೊಂಡ ಆರೋಪಿಯೆಂದು ಘೋಷಿಸಿತ್ತು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *