ಕಾಸರಗೋಡು: ಒಂದೇ ಕುಟುಂಬದ ಬಾಲಕ ಸೇರಿ ಆರು ಮಂದಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕೊರಕೋಡಿನ ಇಮ್ರಾನ್, ತಳಂಗರೆ ಬಾಂಗೋಡಿನ ಸನಾಫ್, ಕೊರಕೋಡಿನ ಅಹಮದ್ ಹಾಗೂ ಬಾಂಗೋಡಿನ ಬಾಸಿತ್ ಬಂಧಿತರು. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆ.8ರಂದು ರಾತ್ರಿ ಕೊರಕೋಡಿನ ಅಂಗಡಿಯೊಂದರ ಬಳಿ ಜಾಫರ್ ಸಾದಿಕ್, ಅವರ 15 ವರ್ಷದ ಸಹೋದರ, ತಂದೆ ಅಬ್ದುಲ್ ಕರೀಂ ಸೇರಿದಂತೆ ಆರು ಮಂದಿಗೆ ಇರಿದು ಗಾಯಗೊಳಿಸಲಾಗಿತ್ತು. ಗಾಯಾಳು ಸಾದಿಕ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲ್ಲಿಯಿಂದ ಕಳುಹಿಸಲಾಗಿದ್ದ ಎಂಟು ಪವನ್ ಚಿನ್ನಾಭರಣದಲ್ಲಿದ್ದ 30 ಗ್ರಾಂ ಚಿನ್ನದ ಉಂಗುರವನ್ನು ಹಿಂದಿರುಗಿಸದ ವಿಚಾರಕ್ಕೆ ಸಂಬಂಧಿಸಿದ ದ್ವೇಷವೇ ದಾಳಿಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಸಾದಿಕ್ ಅವರ ತಂದೆ ಪ್ರಶ್ನಿಸಿದ್ದರಿಂದ ಆರೋಪಿಗಳು ಇರಿದು ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

