Breaking News

ಕೇಂದ್ರ ಸರ್ಕಾರವು ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ನರೇಂದ್ರ ಮೋದಿ ಸರ್ಕಾರವು ರೈತರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಆಗ್ರಹಿಸಿದ್ದಾರೆ.
ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ‘ಎಕ್ಸ್‌’ ಖಾತೆಯಲ್ಲಿ ಸಂದೇಶ ನೀಡಿರುವ ಅವರು, ಭಾರತದ ಬೆನ್ನೆಲುಬು ಎನಿಸಿರುವ ರೈತರು ದೇಶದ ಹೆಮ್ಮೆಯೂ ಹೌದು.
ಎಲ್ಲ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಕಿಸಾನ್‌ ದಿವಸ್‌ನ ಶುಭಾಶಯಗಳು. ರೈತರ ಪರವಾಗಿ ಹೋರಾಟ ನಡೆಸಿರುವ ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರಿಗೆ ಗೌರವಪೂರ್ವಕ ನಮನಗಳು ಎಂದು ಹೇಳಿದ್ದಾರೆ. ಚರಣ್‌ ಸಿಂಗ್ ಅವರ ಜನ್ಮದಿನವನ್ನು ‘ಕಿಸಾನ್‌ ದಿವಸ್‌’ ಆಗಿ ಆಚರಿಸಲಾಗುತ್ತದೆ.
ಮೋದಿ ಸರ್ಕಾರವು ತನ್ನ ಮೊಂಡುತನ ಮತ್ತು ರೈತ ವಿರೋಧಿ ನೀತಿಗಳ ಮೂಲಕ ನಮ್ಮ ರೈತರಿಗೆ ಇನ್ನಷ್ಟು ಅನ್ಯಾಯ ಮಾಡುವುದಿಲ್ಲ ಎಂಬ ವಿಶ್ವಾಸ ನನ್ನದು. ಈ ಹಿಂದೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಲಿ ಎಂದಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೂ ರೈತರಿಗೆ ‘ಕಿಸಾನ್ ದಿವಸ್’ನ ಶುಭಾಶಯ ಕೋರಿದ್ದಾರೆ.
ದೇಶದ ಎಲ್ಲಾ ಅನ್ನದಾತರಿಗೆ ಗೌರವಾನ್ವಿತ ವಂದನೆಗಳು. ಅವರ ಕಠಿಣ ಪರಿಶ್ರಮವು ನಮ್ಮ ದೇಶವನ್ನು ಸಮೃದ್ಧಗೊಳಿಸುತ್ತದೆ. ದೇಶಕ್ಕೆ ಮಹಾನ್ ಕೊಡುಗೆ ನೀಡಿರುವ ರೈತರಿಗೆ ನಾವು ಕೃತಜ್ಞರಾಗಿರುತ್ತೇವೆ ಮತ್ತು ಅವರ ಹಕ್ಕುಗಳು ಹಾಗೂ ಗೌರವವನ್ನು ಕಾಪಾಡಲು ಯಾವಾಗಲೂ ಸಿದ್ಧರಿದ್ದೇವೆ’ ಎಂದು ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Share News

About BigTv News

Check Also

ದೀಪಾವಳಿ ಹಬ್ಬದ ದಿನವೇ ಕುಟುಂಬಸ್ಥರು ಕಣ್ಣೀರು! ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್​ ಸವಾರನ ಪ್ರಾಣ ತೆಗೆದ ಮಹಿಳೆ ಪರಾರಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ವೇಗವಾಗಿ ಚಲಾಯಿಸುತ್ತಿದ್ದ ಮಹೀಂದ್ರಾ ಥಾರ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 55 ವರ್ಷದ …

Leave a Reply

Your email address will not be published. Required fields are marked *