Breaking News

ಫೇಸ್ ಬುಕ್ ನಲ್ಲಿ ಬಂದ ಹೂಡಿಕೆ ಮಾಹಿತಿ ನಂಬಿ 28 ಲಕ್ಷಕ್ಕೂ ಕಳೆದುಕೊಂಡ ಮೈಸೂರಿಗರು

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಬಂದ ಹೂಡಿಕೆ ಜಾಹೀರಾತುಗಳನ್ನು ನಂಬಿದ ನಗರದ ಇಬ್ಬರು ನಿವಾಸಿಗಳು ಅಪಾರ ಲಾಭದ ಆಸೆಯಿಂದ ₹28.23 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಜೆ.ಪಿ.ನಗರದ 72 ವರ್ಷದ ರಾಜೇಶ್‌ ಅವರು ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿ ಹರಿದಾಡಿದ ನಕಲಿ ಹೂಡಿಕೆ ವಿಡಿಯೊ ನಂಬಿ ₹12.93 ಲಕ್ಷ ಕಳೆದುಕೊಂಡಿದ್ದಾರೆ. ಆರಂಭದಲ್ಲಿ ₹65 ಸಾವಿರ ವಾಪಸ್‌ ಬಂದಿದ್ದು, ಬಳಿಕ ಹಣ ಪಡೆಯಲು ಮತ್ತಷ್ಟು ಠೇವಣಿ ಮಾಡುವಂತೆ ವಂಚಕರು ಒತ್ತಾಯಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಸಿದ್ದಾರ್ಥನಗರದ 50 ವರ್ಷದ ಅರುಣ್‌ ಅವರು ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ದುಪ್ಪಟ್ಟು ಲಾಭದ ಆಸೆಯಿಂದ ವಂಚಕರು ಕಳುಹಿಸಿದ ಲಿಂಕ್ ಮೂಲಕ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ₹15.29 ಲಕ್ಷ ಹೂಡಿಕೆ ಮಾಡಿದ್ದಾರೆ. ಬಳಿಕ ವಂಚಕರು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಇಬ್ಬರೂ 1930 ಸೈಬರ್‌ ಕ್ರೈಂ ಸಹಾಯವಾಣಿಗೆ ದೂರು ನೀಡಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *