Breaking News

ಬೆಂಗಳೂರಿನಲ್ಲಿ ‘ಪಾರ್ಕಿಂಗ್’ ಗಲಾಟೆ: ಕಾರಿನ ಬಾನೆಟ್ ಮೇಲೆ ಕಲ್ಲಿನಿಂದ ‘ನೋ ಪಾರ್ಕಿಂಗ್’ ಎಂದು ಕೆತ್ತಿ ವಿಕೃತ ಮೆರೆದ ದಂಪತಿ!

ಬೆಂಗಳೂರು ಬಿಟಿಎಂ ಲೇಔಟ್‌ನಲ್ಲಿ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದ ಬಲೀನೋ ಕಾರಿನ ಮೇಲೆ ಕಲ್ಲು ಹಾಗೂ ಚೂಪಾದ ವಸ್ತುವಿನಿಂದ ಗೀಚಿ, ಬಾನೆಟ್ ಮೇಲೆ ‘NO PARKING’ ಎಂದು ಕೆತ್ತಲಾಗಿದೆ. ಜೋಶ್ವಾ ಜಯ್‌ಕುಮಾರ್ ಎಂಬವರು ಸ್ನೇಹಿತನನ್ನು ಭೇಟಿಯಾಗಲು ರಾತ್ರಿ 11.30ರ ಸುಮಾರಿಗೆ ಬಿಟಿಎಂ ಲೇಔಟ್‌ಗೆ ಬಂದಿದ್ದರು. ರಸ್ತೆಯಲ್ಲಿ ನೋ ಪಾರ್ಕಿಂಗ್ ಬೋರ್ಡ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು, ಯಾರಿಗೂ ಅಡ್ಡಿಯಾಗದಂತೆ ಕಾರು ನಿಲ್ಲಿಸಿದ್ದರು. ಆದರೆ ಬೆಳಗ್ಗೆ ವಾಪಸ್ ಬಂದಾಗ ಕಾರಿನ ಬಾಡಿ ಹಾಗೂ ಬಣ್ಣಕ್ಕೆ ಭಾರೀ ಹಾನಿಯಾಗಿರುವುದು ಕಂಡುಬಂದಿದೆ. ಸಮೀಪದ ಕಟ್ಟಡದ ಮಾಲೀಕ ದಂಪತಿಯೇ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಜೋಶ್ವಾ, ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆ ಕುರಿತು ಜೋಶ್ವಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಪಾರ್ಕಿಂಗ್ ಸಮಸ್ಯೆಯಿದ್ದರೆ ಬಿಬಿಎಂಪಿ ಅಥವಾ ಸಂಚಾರ ಪೊಲೀಸರಿಗೆ ದೂರು ನೀಡಬಹುದಿತ್ತು. ಬದಲಾಗಿ ಬೇರೆಯವರ ಆಸ್ತಿಯನ್ನು ಹಾನಿಗೊಳಿಸುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಸೇಡು ತೀರಿಸಿಕೊಳ್ಳುವ ಸಲಹೆ ನೀಡಿದರೆ, ಕಾನೂನನ್ನು ಕೈಗೆತ್ತಿಕೊಳ್ಳದೆ ಪೊಲೀಸರ ಮೂಲಕವೇ ಕ್ರಮ ಕೈಗೊಳ್ಳಬೇಕು ಎಂದು ಹಲವರು ಮನವಿ ಮಾಡಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *