Breaking News

ಕಾಂಗ್ರೆಸ್ ಸರ್ಕಾರದ ವಿರುದ್ಧ ಗೋವಿಂದ್ ಕಾರಜೋಳ ಕಿಡಿ…..

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ಪಿಎಂ ಅಭ್ಯರ್ಥಿ ಬಿಂಬಿಸುವ ಯತ್ನ ಮಾಡಲಾಗಿದೆ.ಕಾಂಗ್ರೆಸ್ ನಲ್ಲಿ ಇದೊಂದು ಮೋಸದಾಟ ಅಷ್ಟೇ.ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನಲ್ಲಿ ಪ್ರಧಾನಿ ಆಗಲ್ಲ ಎಂದರು.ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲ್ಲ,ಪ್ರಧಾನಿ ನರೇಂದ್ರ ಮೋದಿ ಅವರು ಇರುವವರಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು.ಉದ್ದೇಶ ಪೂರ್ವಕವಾಗಿಯೇ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುನ್ನಲೇ ತರಲಾಗುತ್ತದೆ.ದಲಿತರನ್ನ ಪ್ರಧಾನಿ ಅಭ್ಯರ್ಥಿಎಂದು ಘೋಷಣೆ ಮಾಡಿದವು ಆದರೆ ಅಧಿಕಾರಕ್ಕೆ ಬರಲಿಲ್ಲ ಅಂತಾ ಕಾಂಗ್ರೆಸ್ ನವರು ಗೊಬೆ ಕುರಿಸುವ ಹುನ್ನಾರ ಮಾಡುತ್ತಿದ್ದಾರೆ.ದಲಿತರ ಮೇಲೆ ಕಾಂಗ್ರೆಸ್ ಗೆ ಪ್ರೀತಿ ಇದ್ದರೆ 2013 ರಲ್ಲಿಯೇ ಮಾಡಬೇಕಿತ್ತು, ಆಗ ಕಾಂಗ್ರೆಸ್ ಸ್ಪಷ್ಟವಾದ ಬಹುಮತ ಬಂದಿತ್ತು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಜಿ ಪರಮೇಶ್ವರ ರಾಜ್ಯ ಸುತ್ತಾಡಿ ಪಕ್ಷವನ್ನ ಅಧಿಕಾರಕ್ಕೆ ತಂದರು ಆದರೆ ಜಿ ಪರಮೇಶ್ವರಗೂ ಏನು ಮಾಡಲಿಲ್ಲ.ಅಂದು ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಬೇಕು ಅಂತಾ ಮಾಡಿದರು.ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಆಂತರಿಕ ಚುನಾವಣೆ ನಡೆಸಿದರು.ಸಿದ್ದರಾಮಯ್ಯಾ ಹಾಗೂ ಮಲ್ಲಿಕಾರ್ಜುನ ಖರ್ಗೆಗೆ ಶಾಸಕರು ಮತ ಚಲಾವಣೆ ಮಾಡಿದರು.ಮಲ್ಲಿಕಾರ್ಜುನ ಖರ್ಗೆಗೆ ಕೇವಲ 16-17 ಮತ ಬಂದವುಅಷ್ಟೇ,ಸಿದ್ದರಾಮಯ್ಯಗೆ ಅಧಿಕ ಮತ ಬಂದವು ಸಿದ್ದರಾಮಯ್ಯಾ ಸಿಎಂ ಅಭ್ಯರ್ಥಿ ಆಗಿ ಘೋಷಣೆ ಮಾಡಲಾಯಿತು.ನಾವು ಕಾಂಗ್ರೆಸ್ ಆಡಳಿತವನ್ನ ಬಹಳ ದಿನಗಳಿಂದ ನೋಡಿದ್ದೇವೆ.60 ವರ್ಷಗಳ ಆಡಳಿತ, ಜೊತೆಗೆ ಜವಾಹರಲಾಲ್ ನೆಹರು ಮನೆತನದ 36 ವರ್ಷ ಆಡಳಿತ ಗೊತ್ತು, ಆದರೆ ಈಗ ಕಾಂಗ್ರೆಸ್ ನರಿಗೆ ಯಾಕೋ ದಲಿತರ ಮೇಲೆ ಪ್ರೀತಿ ಉಕ್ಕಿ ಬಂದಿದೆ.ಬರಿ ದಲಿತರ ಮೇಲಿನ‌ ಡಾಂಭಿಕ ಫ್ರೀತಿ ಅದು. ನಿಜವಾದ ಪ್ರೀತಿ ಏನಿಲ್ಲ ಎಂದು ಹೇಳಿದರು.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *