ಲಿಂಗಸುಗೂರು: ಕರಡಕಲ್ ಗ್ರಾಮದ ದಲಿತ ಮಹಿಳೆ ರಾಣಿಮ್ಮ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನೀರಲಕೇರಿ ಗ್ರಾಮದ ಅಮರೇಶ ಗಾಣಿಗನನ್ನು ಪೊಲೀಸರು ಬಂಧಿಸಿದ್ದಾರೆ. ಆ.19ರಂದು ಮನೆಯಿಂದ ಹೊರಹೋಗಿದ್ದ ರಾಣಿಮ್ಮ ಅವರ ಮೃತದೇಹ ಜಾಲಿಬೆಂಚಿ ಗ್ರಾಮದ ಹೊರವಲಯದ ಹೊಲದಲ್ಲಿ ಪತ್ತೆಯಾಗಿತ್ತು. ತನಿಖೆ ವೇಳೆ ರಾಣಿಮ್ಮ ಅವರನ್ನು ಅಮರೇಶ ಮೋಟಾರ್‌ಸೈಕಲ್‌ನಲ್ಲಿ ಕರೆದುಕೊಂಡು ಹೋಗಿದ್ದನ್ನು ಸಾಕ್ಷಿಯೊಬ್ಬರು ನೋಡಿರುವುದು ಹಾಗೂ ಹೊಲದ ಬಳಿ ಕಲ್ಲಿನಿಂದ ಹಲ್ಲೆ ನಡೆಸುತ್ತಿದ್ದುದನ್ನು ಮತ್ತೊಬ್ಬ ಸಾಕ್ಷಿ ಕಂಡಿರುವುದು ಪೊಲೀಸರಿಗೆ ಪ್ರಮುಖ ಸುಳಿವಾಗಿದೆ. ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಪ್ರಕರಣದಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸಂಬಂಧಿತ ಕಲಂಗಳನ್ನೂ ದಾಖಲಿಸಲಾಗಿದೆ. ಬಂಧಿತ ಅಮರೇಶನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

