ಮಂಡ್ಯ ಜಿಲ್ಲೆ ಮಂಡ್ಯ
ಪಟ್ಟಣದ ಶೀಳನೆರೆ ಹೋಬಳಿಯ ನವಿಲುಮಾರನಹಳ್ಳಿ ಗ್ರಾಮಕ್ಕೆ ಸಚಿವ ಸಿ.ಎಸ್.ಪುಟ್ಟರಾಜು ಭೇಟಿ ನೀಡಿ ಸಮಸ್ಯೆಗಳ ಅವಲೋಕನ ಮಾಡಿದರು. ಗ್ರಾಮದಲ್ಲಿ ತಹಶೀಲ್ದಾರ್ ಶಿವಮೂರ್ತಿ ಮತ್ತು ಜಿಲ್ಲಾ ಪಂಚಾಯತಿ
ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಅವರೊಂದಿಗೆ ಪಾದಯಾತ್ರೆ ನಡೆಸಿ ಗ್ರಾಮಸ್ಥರ ಕಷ್ಟಸುಖ
ಆಲಿಸಿದರು. ಕಳೆದ 12 ವರ್ಷಗಳ ಹಿಂದೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯ ಮಾಡಿದ್ದ
ನವಿಲುಮಾರನಹಳ್ಳಿ ಗ್ರಾಮವಿದಾಗಿದ್ದು, ಮುಖ್ಯ ಮಂತ್ರಿಗಳು
ಗ್ರಾಮವಾಸ್ತವ್ಯ ಮಾಡಿದ್ದ ಗ್ರಾಮದ ಮಾಯಿಗೌಡ ಸಚಿವರೊಂದಿಗೆ ಮಾತನಾಡಿ ಮುಖ್ಯಮಂತ್ರಿಗಳು ನಮ್ಮ
ಊರಿಗೆ ಬಂದಿದ್ದು ನಮ್ಮೂರಿನ ಭಾಗ್ಯದ ಬಾಗಿಲು ತೆರೆದಿದೆ. ಗ್ರಾಮವು ಸಮಗ್ರವಾದ ಅಭಿವೃದ್ಧಿಯನ್ನು ಕಂಡಿದೆ. ಆದರೆ ಕೆಲವು ಪತ್ರಿಕೆಗಳಲ್ಲಿ ನಿರಾಧಾರವಾದ ಸುಳ್ಳು ಸುದ್ಧಿಗಳು ವರದಿಯಾಗಿವೆ .ಇವೆಲ್ಲವೂ ನಿರಾಧಾರವಾಗಿವೆ ಎಂದು ತಿಳಿಸಿದರು. ಗ್ರಾಮಕ್ಕೆ ಪಡಿತರ
ವಿತರಣೆ ಮಾಡಲು ಸರ್ಕಾರಿ ನ್ಯಾಯಬೆಲೆ ಅಂಗಡಿಯ ಸ್ಥಾಪನೆ, ಅಗತ್ಯವಾದ ಚರಂಡಿಗಳ ನಿರ್ಮಾಣ ಹಾಗೂ ಊರಿನ ಕೆರೆಗೆ ಹರಳಹಳ್ಳಿ ಏತನೀರಾವರಿ ಯೋಜನೆಯ ಮೂಲಕ
ನೀರು ತುಂಬಿಸಲು ಅಗತ್ಯಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ಸಾರ್ವಜನಿಕರೊಂದಿಗೆ
ಚಹಾ ಕುಡಿದು ಕುಶಲೋಪರಿ ವಿಚಾರಿಸಿದರು. ಸಚಿವ ಪುಟ್ಟರಾಜು
ಅವರು ಪತ್ರಕರ್ತರೊಂದಿಗೆ ಮಾತನಾಡಿ ಪತ್ರಕರ್ತರು ವಾಸ್ತವ ವಿಚಾರಗಳನ್ನು ಮಾತ್ರ ಬರೆಯಬೇಕು.
ಜೆಡಿಎಸ್ ಕಾರ್ಯಕರ್ತರೇ ಸಂಪೂರ್ಣವಾಗಿರುವ ಈ ಗ್ರಾಮವು ಭಾವನಾತ್ಮಕ ಸಂಬಂಧವನ್ನು ಹೊಂದಿದೆ. ಪತ್ರಿಕೆಗಳಲ್ಲಿ
ಪ್ರಕಟವಾದ ಸುಳ್ಳು ಸುದ್ಧಿಗಳಿಂದ ಮನಸ್ಸಿಗೆ ನೋವಾಗಿದೆ. ಸ್ವತಃ ಮಾಯಿಗೌಡರೇ ಗ್ರಾಮವಾಸ್ತವ್ಯದ
ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಗ್ರಾ.ಪಂ
ಸದಸ್ಯ ಹರೀಶ್, ರಾಜೇಗೌಡ, ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕಿ ಮೇನಕಾದೇವಿ ಸೇರಿದಂತೆ
ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





