Breaking News

ಭೂತ ಬಿಡಿಸುವುದಾಗಿ ಹೇಳಿ ಯುವತಿಗೆ ಚಿತ್ರಹಿಂಸೆ: ಸತೀಶ್ ಪಾತ್ರಿ ವಿರುದ್ಧ ದೂರು ದಾಖಲು

ಚಿಕ್ಕಮಗಳೂರು: ದೈವಾರಾಧನೆ ಹೆಸರಿನಲ್ಲಿ ಭೂತ ಬಿಡಿಸುವ ನೆಪದಲ್ಲಿ ಸತೀಶ್ ಪಾತ್ರಿ ಎಂಬಾತ ಯುವತಿಗೆ ಚಿತ್ರಹಿಂಸೆ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ, ಆಡಿಯೋ ತುಣುಕುಗಳು ವೈರಲ್ ಆಗಿವೆ. ವಿಡಿಯೋದಲ್ಲಿ ಯುವತಿಯನ್ನು ಹೆದರಿಸಿ, ಕೋಳಿ ರಕ್ತ ಕುಡಿಯುವಂತೆ ಒತ್ತಾಯಿಸಿ, ಕರ್ಪೂರದ ಬೆದರಿಕೆ ಹಾಕಿರುವ ದೃಶ್ಯಗಳಿವೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಎನ್.ಆರ್.ಪುರ ಠಾಣೆಗೆ ದೂರು ನೀಡಲಾಗಿದೆ. ಆದರೆ ಆರೋಪಗಳನ್ನು ಸತೀಶ್ ಪಾತ್ರಿ ನಿರಾಕರಿಸಿದ್ದು, ವೈರಲ್ ಆಗಿರುವುದು ಮೂರು ವರ್ಷ ಹಳೆಯ ವಿಡಿಯೋ. ಕಳೆದ ಒಂದೂವರೆ ವರ್ಷದಿಂದ ದರ್ಶನ ಸೇವೆ ನಿಲ್ಲಿಸಿರುವುದಾಗಿ ತಿಳಿಸಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *