ಉಡುಪಿ: ಫೇಸ್‌ಬುಕ್‌ನಲ್ಲಿ ಆನ್‌ಲೈನ್ ಲಾಟರಿ ಜಾಹೀರಾತು ನೋಡಿ ಟಿಕೆಟ್ ಖರೀದಿಸಿದ ಜುಲಿಯಾನ ಎಂಬ ಮಹಿಳೆ ಸೈಬರ್ ವಂಚಕರ ಬಲೆಗೆ ಬಿದ್ದು ₹27,06,862 ಕಳೆದುಕೊಂಡಿದ್ದಾರೆ. ಲಾಟರಿ ಬಹುಮಾನ ಬಂದಿದ್ದು, ಅದನ್ನು ಪಡೆಯಲು ಪ್ರೊಸೆಸಿಂಗ್, ಶಿಪ್ಪಿಂಗ್ ಹಾಗೂ ಇತರೆ ಶುಲ್ಕ ಪಾವತಿಸುವಂತೆ ವಂಚಕರು ತಿಳಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಏಪ್ರಿಲ್‌ನಿಂದ ಜುಲೈ 31ರವರೆಗೆ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ. ಬಳಿಕ ಬಹುಮಾನವೂ ಬಾರದೆ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಕುರಿತು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

