Breaking News

ಮತ್ತೆ ಡಿ ಕೆ ಶಿವಕುಮಾರ್‌ ಜೈಲಿಗೆ ಹೋಗುತ್ತಾರೆ ಎಂದ ಈಶ್ವರಪ್ಪ….

ಶಿವಮೊಗ್ಗ: ಅಕ್ರಮ ಅಸ್ತಿ ಗಳಿಕೆ ಹಿನ್ನಲೆ ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ ನೀಡಿದೆ. ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದ್ದು, ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಅವರು ಮತ್ತೆ ಡಿ ಕೆ ಶಿವಕುಮಾರ್‌ ಜೈಲಿಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಹೌದು, ಈ ಕುರಿತು ಗುರುವಾರ ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಬರೆದಿಟ್ಟುಕೊಳ್ಳಿ ಇವತ್ತಲ್ಲ, ನಾಳೆ ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗಲಿದ್ದಾರೆ. ಕೇಸಿನಿಂದಲೇ ಖುಲಾಸೆಯಾದಂತೆ ಜೈಲಿನಿಂದ ಹೊರ ಬಂದಾಗ ವರ್ತಿಸಿದ್ದರು. ಡಿ ಕೆ ಶಿವಕುಮಾರ್‌ ಭಂಡತನದಿಂದ ವರ್ತಿಸುತ್ತಿದ್ದಾರೆ. ಉತ್ತರ ಕೊಡುವಾಗ ಸಹ ಗುಂಡಾಗಿರಿ ಮಾಡುತ್ತಾರೆ ಎಂದು ಡಿ ಕೆ ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನನ್ನ ಕೇಸು ಕೋರ್ಟಿನಲ್ಲಿದೆ ಎಂದು ಸೌಜನ್ಯದಿಂದ ಇರಲು ಬರುವುದಿಲ್ಲವಾ.? ಜೈಲಿನಿಂದ ಹೊರಬಂದಾಗ ವಿರೋಚಿತವಾಗಿ ಮೆರವಣಿಗೆ ನಡೆಸಿದ್ದರು. ಈಗ ಸಿಬಿಐ ಮತ್ತೆ ತನಿಖೆ ನಡೆಸಲಿದೆ. ಡಿ.ಕೆ. ಶಿವಕುಮಾರ್ ಭಂಡತನದಿಂದ ವರ್ತಿಸುತ್ತಿದ್ದಾರೆ, ಅಕ್ರಮ ಹಣ ಸಿಕ್ಕಾಗ ತನಿಖೆ ಮಾಡುತ್ತೆವೆಂದು ಹೇಳಬೇಕು. ಆದರೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಏನು ಬೇಕಾದರೂ ಉತ್ತರ ಕೊಡುತ್ತಾರೆ ಎಂದು ಹೇಳಿದರು.

Share News

About BigTv News

Check Also

ಹೆಸ್ಕಾಂ ಎಇಇ ದಂಪತಿ ಮನೆ-ಕಚೇರಿಗೆ ಲೋಕಾಯುಕ್ತ ದಾಳಿ..! ಅಪಾರ ಚಿನ್ನ, ನಗದು ಪತ್ತೆ ಶಂಕೆ..

ಬೆಳ್ಳಂಬೆಳಗ್ಗೆ ಕರೆಂಟ್ ಅಧಿಕಾರಿಗಳಿಗೆ ಶಾಕ್..! ಅಕ್ಷಯ ಕಾಲೋನಿ ಮನೆಯಲ್ಲಿ ಚಿನ್ನದ ರಾಶಿ..? ಗೋಲ್ಡ್ ಸ್ಮಿತ್ ಕರೆಸಿ ತೂಕ ಹಾಕಿಸಿದ ಲೋಕಾಯುಕ್ತರು..! …

Leave a Reply

Your email address will not be published. Required fields are marked *