ಬೆಂಗಳೂರು: ಎಲೆಕ್ಟ್ರಾನಿಕ್‌ಸಿಟಿಯ ಸೀಸನ್ಸ್ ಹೋಟೆಲ್ ಸಮೀಪ ರ್ಯಾಪಿಡೋ ಬೈಕ್ ಸವಾರನ ಮೇಲೆ ಮೂವರು ಆಟೋ ಚಾಲಕರು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಗ್ರಾಹಕರಿಗಾಗಿ ಕಾಯುತ್ತಿದ್ದ ಯುವಕನಿಗೆ ಬೈಕ್ ಸೈಡ್‌ಗೆ ಹಾಕುವಂತೆ ಹೇಳಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದು, ಬಳಿಕ ಇನ್ನಿಬ್ಬರು ಚಾಲಕರು ಸೇರಿಕೊಂಡಿದ್ದಾರೆ. ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಾಮಪುರ ಠಾಣೆ ಪೊಲೀಸರು ಮಂಡ್ಯದ ಸುಪ್ರೀತ್ (26) ಹಾಗೂ ರವಿ (24) ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 11 ದ್ವಿಚಕ್ರ ವಾಹನಗಳು ಹಾಗೂ ಒಂದು ಆಟೋರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ಮೌಲ್ಯ ಸುಮಾರು ₹11.46 ಲಕ್ಷ ಎಂದು ಅಂದಾಜಿಸಲಾಗಿದೆ. ಫುಡ್ ಡೆಲಿವರಿ ಬಾಯ್ ಸೇರಿದಂತೆ ಹಲವರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಮೂವರನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶೇಖ್‌ಮಾಜಾ, ಸೈಯ್ಯದ್ ಅಫ್ರೀದ್ ಉಲ್ಲಾ ಹಾಗೂ ಮೊಹಮದ್ ಶಾದಿಕ್ ಬಂಧಿತರು. ಆರೋಪಿಗಳಿಂದ ನಾಲ್ಕು ಮೊಬೈಲ್ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

