ಬೆಂಗಳೂರಿನ ಐಟಿಸಿ ಫ್ಲೈಓವರ್ ಮೇಲೆ ಮುಂಜಾನೆ ದಂಪತಿಯನ್ನು ಅಡ್ಡಗಟ್ಟಿದ ಐದಾರು ಮಂದಿ ದುಷ್ಕರ್ಮಿಗಳು ಚಾಕು ತೋರಿಸಿ ಹಲ್ಲೆ ನಡೆಸಿ, ಮೊಬೈಲ್, ಬ್ರಾಸ್‌ಲೆಟ್ ಹಾಗೂ ಪರ್ಸ್ ದೋಚಿದ್ದಾರೆ. ಸ್ನೇಹಿತರ ಮನೆಗೆ ತೆರಳಿ ಆಟೋದಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಘಟನೆ ನಡೆದಿದೆ. ದರೋಡೆ ಬಳಿಕ ಮಹಿಳೆಯನ್ನು ಆಟೋದಿಂದ ಹೊರಗೆಳೆದು, ಆಕೆಯ ಪತಿಯ ಎದುರಲ್ಲೇ ಲೈಂಗಿಕ ಕಿರುಕುಳ ನೀಡಿರುವ ಆರೋಪವೂ ಕೇಳಿಬಂದಿದೆ. ಮಹಿಳೆ ಕಿರುಚಾಡುತ್ತಿದ್ದಂತೆ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಆಘಾತಕ್ಕೊಳಗಾದ ದಂಪತಿ ಪುಲಕೇಶಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

