ಬೆಂಗಳೂರು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಅರ್ಜುನ್ ಎಂಬ ವ್ಯಕ್ತಿಯನ್ನು ತಲೆಗೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಪಳನಿ ಎಂಬಾತನ ಮೇಲೆ ಕೊಲೆ ಆರೋಪದ ಶಂಕೆ ವ್ಯಕ್ತವಾಗಿದ್ದು, ಇಬ್ಬರ ನಡುವಿನ ದೀರ್ಘಕಾಲದ ವೈಷಮ್ಯವೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಅರ್ಜುನ್ ಹಾಗೂ ಪಳನಿ ಇಬ್ಬರ ವಿರುದ್ಧವೂ ಕೆಜಿ ಹಳ್ಳಿ ಠಾಣೆಯಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಕಳೆದ ವರ್ಷ ಹಾಗೂ 7–8 ತಿಂಗಳ ಹಿಂದೆಯೂ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಪಳನಿಯ ಮದುವೆ ಸಂದರ್ಭದಲ್ಲೂ ಅರ್ಜುನ್ ಗಲಾಟೆ ಮಾಡಿದ್ದರಿಂದ ಪಳನಿ ದೂರು ನೀಡಿದ್ದ ಎನ್ನಲಾಗಿದೆ. ನಿನ್ನೆ ಸಂಜೆ ಸುಮಾರು 5 ಗಂಟೆ ವೇಳೆಗೆ ಅರ್ಜುನ್‌ನನ್ನು ಹಿಂಬಾಲಿಸಿದ ಪಳನಿ, ನಿರ್ಜನ ಪ್ರದೇಶಕ್ಕೆ ತೆರಳುತ್ತಿದ್ದಂತೆ ದಾಳಿ ನಡೆಸಿ ತಲೆಗೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ಸಂಬಂಧ ಪಳನಿಯನ್ನು ವಶಕ್ಕೆ ಪಡೆದಿರುವ ಕೆಜಿ ಹಳ್ಳಿ ಪೊಲೀಸರು, ಹತ್ಯೆಯ ಹಿಂದಿನ ನಿಖರ ಕಾರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

