ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್‌ಎಚ್ ಕ್ಯಾಂಪ್-5ರ ಹೊರವಲಯದ ಜಮೀನಿನಲ್ಲಿ ಸ್ನೇಹಾ (26) ಎಂಬ ಗೃಹಿಣಿಯನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಆಕೆಯ ಎರಡು ವರ್ಷದ ಮಗುವನ್ನು ಶವದ ಪಕ್ಕದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ತಾಯಿ ಎಚ್ಚರಗೊಳ್ಳದೆ ಮಲಗಿದ್ದಾಳೆ ಎಂದು ಭಾವಿಸಿದ ಕಂದಮ್ಮ ಅಳುತ್ತಾ ಕೊನೆಗೆ ತಾಯಿಯ ಶವದ ಮೇಲೆಯೇ ನಿದ್ರೆಗೆ ಜಾರಿತ್ತು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪತಿ ಅಮಿತ್ ಹಾಗೂ ಪ್ರಿಯಕರ ಶುಭಮ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯ ಮೇಲೆ ಬಲವಾದ ಅಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ರಾಯಚೂರು ಎಸ್‌ಪಿ ಅರುಣಾಂಶುಗಿರಿ ತಿಳಿಸಿದ್ದಾರೆ. ಇದೇ ವೇಳೆ ದಾವಣಗೆರೆಯ ಶೇಖರಪ್ಪ ಬಡಾವಣೆಯಲ್ಲಿ ನಾಗರತ್ನ ಎಂಬ ಒಂಟಿ ಮಹಿಳೆಯನ್ನು ಕತ್ತು ಕೊಯ್ದು ಹತ್ಯೆ ಮಾಡಲಾಗಿದ್ದು, ಆರೋಪಿ ನಾಗರಾಜನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

